Intresting News: ನಿಜ ಹೇಳ್ಬೇಕು ಅಂದ್ರೆ ಹುಡುಗಿಯರ (girls) ಮನಸ್ಸಲ್ಲಿ ಏನಿದೆ ಎಂದು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಹುಡುಗಿಯರ ಮನಸ್ಸು ಈಗ ಇದ್ದ ಹಾಗೆ ಮತ್ತೆ ಇರುವುದಿಲ್ಲ. ಕ್ಷಣ ಕ್ಷಣದ ಬದಲಾಗುತ್ತಲೇ ಇರುತ್ತದೆ. ಅಂದಹಾಗೆ ನಿಮಗೆ ಹುಡುಗಿಯೊಬ್ಬಳು ಮೆಸೇಜ್ (msg) ಮಾಡ್ತಿದ್ದಾಳೆ. ನಿಮಗೆ ಅವಳ ಮೇಲೆ ಲವ್ ಆಗಿದೆ. ಆದ್ರೆ ಅವಳಿಗೂ ಅದೇ ಭಾವನೆ ಇದೆ ಎಂದು ತಿಳಿದುಕೊಳ್ಳೋದು ಹೇಗೆ? (Intresting News) ಇಲ್ಲಿದೆ ನೋಡಿ ಮಾಹಿತಿ. ಹುಡುಗೀರು ಹೀಗೆಲ್ಲಾ ಟೆಕ್ಸ್ಟ್ ಮಾಡಿದ್ರೆ ಪಕ್ಕಾ ನಿಮ್ ಮೇಲೆ ಲವ್ವಾಗಿದೆ (love) ಅಂತಾನೆ ಅರ್ಥ!!!.
ಹೆಚ್ಚಿನ ಹುಡುಗಿಯರು ಯಾರಾದರೂ ತಮಗೆ ಇಷ್ಟವಾದರೆ ನೇರವಾಗಿ ಹೇಳುವುದಿಲ್ಲ. ಬದಲಿಗೆ ತಮ್ಮ ನಡವಳಿಕೆಯ ಮೂಲಕ ಅದನ್ನು ತೋರ್ಪಡಿಸುತ್ತಾರೆ. ಹೌದು, ನಿಮಗೆ ಹುಡುಗಿಯೊಬ್ಬಳು ತಾನಾಗಿಯೇ ಹೆಚ್ಚೆಚ್ಚು ಮೆಸೇಜ್ ಮಾಡುತ್ತಿದ್ದರೆ, ಆಕೆ ತನ್ನ ಎಲ್ಲಾ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡರೆ ಅವಳಿಗೆ ನಿಮ್ಮ ಮೇಲೆ ಲವ್ ಆಗಿದೆ ಎಂದರ್ಥ.
ಎಲ್ಲಾ ಪ್ರೀತಿಯಲಿ ಬಿದ್ದಿರುವ ಹುಡ್ಗೀರಿಗೆ ಪೊಸೆಸಿವ್ ನೆಸ್ ಇದ್ದೇ ಇರುತ್ತದೆ. ಹುಡುಗಿ ಎಲ್ಲರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಾನು ಪ್ರೀತಿಸುವ ಹುಡುಗನ ಬಗ್ಗೆ ಹೆಚ್ಚು ಪೊಸೆಸಿವ್ ಆಗಿರುತ್ತಾಳೆ. ನೀವು ಇನ್ನೊಬ್ಬ ಹುಡುಗಿಯ ಜೊತೆ ಹೆಚ್ಚು ಮಾತನಾಡಿದಾಗ ಆಕೆಗೆ ಸಿಟ್ಟು ಬರುತ್ತಿದ್ದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂದರ್ಥ.
ಪ್ರತಿ ಹುಡುಗಿ ತನ್ನ ದಿನದ ಆರಂಭದಲ್ಲಿ ಹಾಗೂ ತಾನು ಮಲಗುವ ಹೊತ್ತಿನಲ್ಲಿ ತಾನು ಪ್ರೀತಿಸುವವನನ್ನು ನೆನಪಿಸಿಕೊಳ್ಳಲು ಬಯಸುತ್ತಾಳೆ. ತಾನು ಪ್ರೀತಿಸುವಾತನೊಂದಿಗೆ ಮಾತನಾಡಬೇಕು, ಆತನೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಾಳೆ.
ಆಕೆ ಪ್ರತಿದಿನ ನಿಮಗೆ ತಪ್ಪದೆ ಗುಡ್ ಮಾರ್ನಿಂಗ್, ಗುಡ್‌ನೈಟ್ ಕಳುಹಿಸುತ್ತಿದ್ದರೆ ಆಕೆಗೆ ನಿಮ್ಮ ಬಗ್ಗೆ ಫೀಲಿಂಗ್ಸ್ ಇದೆ ಎಂದು ಅರ್ಥ ಮಾಡಿಕೊಳ್ಳಿ.
ಸಣ್ಣ ವಿಷಯದ ಬಗ್ಗೆಯೂ ಕಾಳಜಿ ತೋರಿದರೆ, ತನ್ನ ದೈನಂದಿನ ಚಟುವಟಿಕೆಯ ಬಗ್ಗೆ ಪ್ರತಿದಿನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೆ ಹಾಗೂ ಇನ್ನೊಬ್ಬರ ಬಳಿ ನಿಮ್ಮ ಬಗ್ಗೆ ಧನಾತ್ಮಕವಾಗಿ ಹೇಳಲು ಹೇಳಿದರೆ ಆಕೆ ನಿಮ್ಮನ್ನು ಪ್ರೀತಿಸುತ್ತಿದ್ದಾಳೆ ಎಂದು ಅರ್ಥಮಾಡಿಕೊಳ್ಳಬಹುದು.
