Actress Ranya Rao: ಚಿನ್ನದ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಮೇಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜತಿನ್ ಹುಕ್ಕೇರಿ ಅವರು ಹಲವು ಬಾರಿ ರನ್ಯಾ ರಾವ್ ಅವರ ಜೊತೆ ದುಬೈಗೆ ಪ್ರಯಾಣ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಮಾಡಿದ್ದಾರೆ. ಇವರಿಬ್ಬರೂ ಇತ್ತೀಚೆಗಷ್ಟೇ ತಾಜ್ ವೆಸ್ಟ್ ಎಂಡ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.
ಇದೀಗ ಪತಿಯ ಮೇಲೂ ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು, ಆತನ ವಿರುದ್ಧವೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಬೆಂಗಳೂರಿನ ಆರ್.ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ವಾಸ್ತುಶಿಲ್ಪಿ ಮತ್ತು ಒಳಾಂಗಣ ವಿನ್ಯಾಸದಲ್ಲಿ ಬಿ.ಆರ್ಕ್ ಪದವಿ ಪಡೆದಿದ್ದಾರೆ. ನಂತರ ಅವರು ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್ -ಎಕ್ಸಿಕ್ಯೂಟಿವ್ ಎಜುಕೇಶನ್‌ನಲ್ಲಿ ತಮ್ಮ ಶಿಕ್ಷಣ ಪಡೆದಿದ್ದಾರೆ. ಜತಿನ್ ಹುಕ್ಕೇರಿ ಅವರು ಯುವ, ವಿನ್ಯಾಸ-ಕೇಂದ್ರದ ವೃತ್ತಿಪರರ ತಂಡ ಡಬ್ಲ್ಯೂಡಿಎ ಅನ್ನು ನಡೆಸುತ್ತಿದ್ದಾರೆ. ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿಯನ್ನು ಪಡೆದಿದ್ದಾರೆ.
