Home » Mangalore: ಮಂಗಳೂರು ದಸರಾ ಕ್ರೀಡೋತ್ಸವದ ಆಮಂತ್ರಣ ಬಿಡುಗಡೆ!

Mangalore: ಮಂಗಳೂರು ದಸರಾ ಕ್ರೀಡೋತ್ಸವದ ಆಮಂತ್ರಣ ಬಿಡುಗಡೆ!

0 comments

Mangalore: ಮಂಗಳೂರು (Mangalore) ತಾಲೂಕು ಬಿಲ್ಲವ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ 21 ರಂದು ನಡೆಯುವ ಮಂಗಳೂರು ದಸರಾ ಕ್ರೀಡೋತ್ಸವದ ಆಮಂತ್ರಣ ಪತ್ರವನ್ನು ಯುವವಾಹಿನಿ ಬಂಟ್ವಾಳ ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಮಂಗಳೂರು ದಸರಾ ಪ್ರಯುಕ್ತ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್, ವಾಲಿಬಾಲ್, ತ್ರೋಬಾಲ್, ಸ್ಪರ್ಧೆಗಳು ಪುರುಷರು ಹಾಗೂ ಮಹಿಳಾ ವಿಭಾಗ ಸೇರಿದಂತೆ ವಿವಿಧ ವಯೋಮಾನದ ಕ್ರೀಡಾಪಟುಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ, ಎಲ್ಲಾ ಆಸಕ್ತ ಕ್ರೀಡಾಪಟುಗಳು ಹಾಗೂ ಸಂಘ ಸಂಸ್ಥೆಗಳಿಗೆ ಮುಕ್ತ ಅವಕಾಶ ಇದೆ ಎಂದು ಮಂಗಳೂರು ತಾಲುಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ ಸುವರ್ಣ ಹಾಗೂ ಕ್ರೀಡೋತ್ಸವದ ಪಥಸಂಚಲನದ ಸಂಚಾಲಕ ಹರೀಶ್ ಪಚ್ಚನಾಡಿ ತಿಳಿಸಿದರು.

Onion price: ಈರುಳ್ಳಿ ಕ್ವಿಂಟಾಲ್‌ಗೆ ಒಂದು ಸಾವಿರ ರೂ. ದಿಢೀರ್‌ ಇಳಿಕೆ!

You may also like