Home » ಐಪಿಎಲ್ ಆಟದ ವೇಳೆ ಜೋಡಿಯೊಂದು ‘ಮೈಮರೆತ ಕ್ಷಣ’ | ಎಲ್ಲರ ಸಮ್ಮುಖದಲ್ಲೇ ‘ ಕಿಸ್ಸಿಂಗ್’ ಆಟ !!!

ಐಪಿಎಲ್ ಆಟದ ವೇಳೆ ಜೋಡಿಯೊಂದು ‘ಮೈಮರೆತ ಕ್ಷಣ’ | ಎಲ್ಲರ ಸಮ್ಮುಖದಲ್ಲೇ ‘ ಕಿಸ್ಸಿಂಗ್’ ಆಟ !!!

by Mallika
0 comments

ಈಗ ಎಲ್ಲೆಡೆ ಕ್ರಿಕೆಟ್ ಬಗ್ಗೆನೇ ಮಾತು. ಐಪಿಎಲ್ 2022 ರ ಆವೃತ್ತಿಯು ಈಗ ನಡೆಯುತ್ತಿದ್ದು ಜನ ಕ್ರಿಕೆಟ್ ವೀಕ್ಷಿಸುತ್ತಿದ್ದಾರೆ. ಐಪಿಎಲ್ ಟೂರ್ನಿಯ 10 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಿದೆ.

ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಲಾಕ್ ಫರ್ಗುಸನ್ ಅವರಂತಹವರು ಡೆಲ್ಲಿ ಬ್ಯಾಟ್ಸ್ ಮ್ಯಾನ್ ಗಳಿಗೆ ಕಡಿವಾಣ ಹಾಕುವಲ್ಲಿ ನಿರತಾಗಿದ್ದ ಸಂದರ್ಭದಲ್ಲಿ ಜಿಟಿ ಎರಡನೇ ಗೆಲುವನ್ನು ದಾಖಲಿಸಿದೆ. ಅಲ್ಲಿ ಆಟಗಾರರು ಆಟದಲ್ಲಿ ಬಿಜಿಯಾಗಿದ್ದರೆ, ಇಲ್ಲೊಂದು ಜೋಡಿ ತಮ್ಮದೇ ಆಟದಲ್ಲಿ ಮಗ್ನರಾಗಿದ್ದರು. ಆಟ ನೋಡ್ಲಿಕ್ಕೆ ಬಂದ ಹಾಗೇನೂ ಆಯಿತು, ತಮ್ಮ ಕೆಲಸನೂ ಆಯಿತು ಅನ್ನೋ ರೀತಿಯ ಒಂದು ಘಟನೆ ಎಲ್ಲರ ಸಮ್ಮುಖದಲ್ಲಿ ನಡೆದಿದೆ. ಅದೇನೆಂದರೆ ಈ ಜೋಡಿಗಳು ಚುಂಬಿಸುತ್ತಾ ತಮ್ಮನ್ನು ತಾವು ಮೈಮರೆತಿರುವುದು ಸ್ಟ್ಯಾಂಡ್‌ನಲ್ಲಿ ಕಂಡು ಬಂದಿದೆ.

ಕೂಡಲೇ ಈ ಫೋಟೋ ಸ್ವಲ್ಪ ಸಮಯದಲ್ಲೇ ವೈರಲ್ ಆಗಿದೆ. ನೆಟಿಜನ್‌ಗಳು ತಮ್ಮ ಸೃಜನಶೀಲತೆಯ ಕಲೆಯನ್ನು ಮೀಮ್ಸ್ ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ.

You may also like

Leave a Comment