Home » RCB Match: ಐಪಿಎಲ್ RCB ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಎಂಟಿಸಿಯಿಂದ ವಿಶೇಷ ಬಸ್ ಸಂಚಾರ 

RCB Match: ಐಪಿಎಲ್ RCB ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಎಂಟಿಸಿಯಿಂದ ವಿಶೇಷ ಬಸ್ ಸಂಚಾರ 

0 comments

RCB Match: ಬೆಂಗಳೂರಿನ(Bengaluru) ಚಿನ್ನಸ್ವಾಮಿ ಮೈದಾನದಲ್ಲಿ(Chinnaswami Stadium) ಬುಧವಾರ ನಡೆಯಲಿರುವ ಆರ್‌ಸಿಬಿ(RCB) ಮತ್ತು ಗುಜರಾತ್ ಟೈಟನ್ಸ್(Gujarat Titan) ವಿರುದ್ಧದ ಐಪಿಎಲ್ 2025ರ ಪಂದ್ಯ ನೋಡಲು ತೆರಳುವ ಪ್ರೇಕ್ಷಕರಿಗಾಗಿ ವಿಶೇಷ ಬಸ್ ಸೇವೆ ಒದಗಿಸುವುದಾಗಿ BMTC ಘೋಷಣೆ ಮಾಡಿದೆ. ಈಗಾಗಲೇ ನಮ್ಮ ಮೆಟ್ರೋ ಕಾರ್ಯಾಚರಣೆ ಸಮಯವನ್ನು ರಾತ್ರಿ 12:30 ರವರೆಗೆ ವಿಸ್ತರಣೆ ಮಾಡಿದೆ.

ಕಾಡುಗೋಡಿ ಬಸ್ ನಿಲ್ದಾಣ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಮೃಗಾಲಯ, ಜನಪ್ರಿಯ ಟೌನ್‌ಷಿಪ್, ಆರ್.ಕೆ.ಹೆಗಡೆ ನಗರ ಯಲಹಂಕ, ಹೊಸಕೋಟೆ, ಬನಶಂಕರಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಶೇಷ ಬಸ್‌ಗಳು ಸಂಚರಿಸಲಿವೆ ಎಂದು BMTC ತಿಳಿಸಿದೆ.

ಪಂದ್ಯ ಆರಂಭವಾಗಲು ಇನ್ನೆನು ಕೆಲವೇ ಗಂಟೆಗಳು ಬಾಕಿ ಇದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಆಟ ನೋಡಲು ಕುತೂಹಲರಾಗಿದ್ದಾರೆ. ಈಗಾಗಲೇ ಜನರು ಮೈದಾನತ್ತ ಧಾವಿಸುತ್ತಿದ್ದು, ತಮ್ಮ ತಮ್ಮ ಆಸನವನ್ನು ತುಂಬಿಕೊಳ್ಳುತ್ತಿದ್ದಾರೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ವರುಣನ ಅವಕೃಪೆ ಬೀಳದಿರಲಿ ಎಂದು ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ. ಸತತ ಎರಡು ಬಾರಿ ಪಂದ್ಯ ಗೆದ್ದಿರುವ ಆರ್‌ಸಿಬಿಯ ಹ್ಯಾಟ್ರಿಕ್‌ ಗೆಲುವಿಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.

You may also like