Home » Hanumantu: ಬಿಗ್ ಬಾಸ್ ಶೋ ಸ್ಕ್ರಿಪ್ಟೆಡ್? ವಿನ್ನರ್ ಹನುಮಂತ ಬಿಚ್ಚಿಟ್ರು ಅಸಲಿ ಸತ್ಯ

Hanumantu: ಬಿಗ್ ಬಾಸ್ ಶೋ ಸ್ಕ್ರಿಪ್ಟೆಡ್? ವಿನ್ನರ್ ಹನುಮಂತ ಬಿಚ್ಚಿಟ್ರು ಅಸಲಿ ಸತ್ಯ

0 comments

Hanumantu : ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಆಗಿ ಹಾಡು ಹಕ್ಕಿ, ಹಳ್ಳಿ ಹೈದ ಹನುಮಂತು ಹೊರ ಹೊಮ್ಮಿದ್ದಾರೆ. ಈ ಸಂಭ್ರಮದೊಂದಿಗೆ ಊರಿಗೆ ಆಗಮಿಸಿದ ಹನುಮಂತು ಅವರಿಗೆ ಊರ ಮಂದಿ ಎಲ್ಲರೂ ವೈಭವದಿಂದ ಬರಮಾಡಿಕೊಂಡಿದ್ದಾರೆ. ಈ ವೇಳೆ ಹನುಮಂತು ಅವರು ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಥವಾ ಅಲ್ಲವೋ ಎಂಬುದರ ಕುರಿತು ಮಾತನಾಡಿದ್ದಾರೆ.

ಹೌದು, ಹನುಮಂತು ಅವರು ಊರಿಗೆ ಬರುವಂತಹ ಸಂದರ್ಭದಲ್ಲಿ ಮಾಧ್ಯಮದವರೊಬ್ಬರು ಅವರನ್ನು ಮಾತನಾಡಿಸಿ ಬಿಗ್ ಬಾಸ್ ಬಗ್ಗೆ ತಮ್ಮ ಅನಿಸಿಕೆ ಏನೆಂದು ಪ್ರಶ್ನೆಸುತ್ತಾರೆ. ಈ ವೇಳೆ ಮಾತನಾಡಿದ ಹನುಮಂತ ಅವರು ಬಿಗ್ ಬಾಸ್ ಒಂದು ದೊಡ್ಡ ವೇದಿಕೆ, ಹೊರಗಡೆ ಜನರು ಅಲ್ಲಿ ಎಲ್ಲ ಹೇಳಿಕೊಟ್ಟು ಮಾಡಿಸುತ್ತಾರೆ ಎಂದು ಹೇಳುತ್ತಾರೆ. ಆದರೆ ಯಾವ ಸುಡುಗಾಡು ಇಲ್ಲ ಏನೂ ಇಲ್ಲ. ಒಳಗಡೆ ಹೋದ ಮೇಲೆ ಹೊರಗೆ ಯಾರು ಸತ್ತರು ಬದುಕಿದರು ಎಂಬುದೇ ತಿಳಿಯುವುದಿಲ್ಲ. ಮೊದಲೇ ಹೇಳಿಕೊಟ್ಟು ಮಾಡಿಸುತ್ತಾರೆ ಎಂಬುದು ಸುಳ್ಳುm ಅದನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಅಲ್ಲದೆ ಹೊರಗಡೆ ನೋಡುವ ಜನರಿಗೆ ಬಿಗ್ ಬಾಸ್ ಗೆ ಹೋದರೆ ಹೆಸರು ಹಾಳಾಗುತ್ತೆ. ಅಲ್ಲಿಗೆ ಹೋಗುವುದು ಸರಿಯಲ್ಲ ಎಂದು ಅನಿಸಬಹುದು. ಆದರೆ ಅಲ್ಲಿಗೆ ಹೋದ ಬಳಿಕ ನಮಗೆ ನಮ್ಮ ಜೀವನದ ಮುಂದಿನ ಪಾಠ ತಿಳಿಯುತ್ತದೆ. ಮುಂದೆ ನಾವು ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಡುವ ವೇದಿಕೆ ಅದಾಗಿದೆ ಎಂದು ಹನುಮಂತು ಹೇಳಿದ್ದಾರೆ.

You may also like