Home » Viral Post: ‘ವಿರಾಟ್ ಕೊಹ್ಲಿಯನ್ನು RSS ಕಾರ್ಯಕರ್ತ’ ಎಂದರೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ? ಇಲ್ಲಿದೆ ಸ್ಪಷ್ಟೀಕರಣ

Viral Post: ‘ವಿರಾಟ್ ಕೊಹ್ಲಿಯನ್ನು RSS ಕಾರ್ಯಕರ್ತ’ ಎಂದರೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ? ಇಲ್ಲಿದೆ ಸ್ಪಷ್ಟೀಕರಣ

0 comments

Viral Post: ವಿರಾಟ್ ಕೊಹ್ಲಿ ಒಬ್ಬ RSS ಕಾರ್ಯಕರ್ತ ಎಂಬುದಾಗಿ ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು ಎಂಬ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಈ ಒಂದು ಪೋಸ್ಟ್ ಕುರಿತು ಲಕ್ಷ್ಮಣ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಫೆಬ್ರವರಿ 23 ರಂದು ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದೆ. ಅದರಲ್ಲೂ ವಿರಾಟ್​ ಕೊಹ್ಲಿ ಶತಕ ಬಾರಿಸಿದ್ದಕ್ಕೆ ಮೆಚ್ಚುಗೆ ಪೋಸ್ಟ್​ಗಳು ಹರಿದಾಡುತ್ತಿವೆ. ಇದರ ಮಧ್ಯ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೆಸರಿನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಆಕ್ಷೇಪಾರ್ಹ ರೀತಿ ಹೇಳಿಕೆ ಪೋಸ್ಟ್ ವೈರಲ್ ಆಗಿತ್ತು. ಪಾಕ್ ನೆಲದಲ್ಲಿ ಪಾಕಿಗಳ ಎದುರೇ ಶತಕ ಸಿಡಿಸಿ ಪಾಕಿಗಳಿಗೆ ಅವಮಾನ ಮಾಡಿ ಭಾರತ ಗೆದ್ದು ಬಂದಿದ್ದು ನೋಡಿದರೆ ವಿರಾಟ್ ಕೊಹ್ಲಿ ಒಬ್ಬ RSS ಕಾರ್ಯಕರ್ತನೇ ಇರಬೇಕು ಎಂದು ಎಂ ಲಕ್ಷ್ಮಣ್ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿತ್ತು.

ಇದೀಗ ತಮ್ಮ ಹೆಸರಿನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಆಕ್ಷೇಪಾರ್ಹ ರೀತಿಯ ಹೇಳಿಕೆಯ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ, ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಈ ರಾಜ್ಯದ ಜನತೆಗೆ ಬರೀ ಸುಳ್ಳನ್ನ ಹೇಳುತ್ತಾ ಬಂದಿದ್ದಾರೆ. ಅದಕ್ಕೆ ಇದೊಂದು ಸಣ್ಣ ಉದಾಹರಣೆ. ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಹೆಸರನ್ನು ಬಳಸಿಕೊಂಡು ಹಿಂದುಗಳ ಭಾವನೆಯನ್ನು ಕೆಣಿಸುವಂತಹ ಪೋಸ್ಟ್‌ಗಳನ್ನು ಹಾಕಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ/ ಸದ್ಯದಲ್ಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

You may also like