Home » Hijab: SSLC ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ಇದೆಯಾ ? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

Hijab: SSLC ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ಇದೆಯಾ ? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

0 comments

Hijab: ರಾಜ್ಯದಲ್ಲಿ ಪರೀಕ್ಷೆ ಹತ್ತಿರ ಬಂತೆಂದರೆ ಸಾಕು ಹಿಜಾಬ್ ವಿಚಾರ ಬಾರಿ ಚರ್ಚೆಯಾಗುತ್ತದೆ. ಇದರ ಕುರಿತು ಪರ ವಿರೋಧ ಚರ್ಚೆಗಳು ಆಗುತ್ತಿವೆ. ಇದೀಗ ಎಸ್‌ಎಸ್‌ಎಲ್ಸಿ ಎಕ್ಸಾಂ ಹತ್ತಿರ ಬರ್ತಾ ಇರೋದ್ರಿಂದ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬುದು ಹಲವರ ಪ್ರಶ್ನೆ. ಇದೀಗ ಗೃಹ ಸಚಿವ ಜಿ.ಪರಮೇಶ್ವರ್ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸುವುದಕ್ಕೆ ಈ ಬಾರಿ ಅವಕಾಶವಿದೆಯಾ ಎಂಬ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ. ಚರ್ಚೆ ಮಾಡಿ ಆ ನಂತರ ನಿರ್ಧಾರ ತಿಳಿಸುತ್ತೇವೆ. ಇನ್ನೊಂದು ತಿಂಗಳಲ್ಲಿ ತಿಳಿಸ್ತೇವೆ ಎಂದಿದ್ದಾರೆ.

You may also like