Home » Ganga Water: ಗಂಗಾಜಲ ಪರೀಕ್ಷೆ ಮಾಡಿದವನಿಗೆ ಕಾದಿತ್ತು ಶಾಕ್! ನಿಜವಾಗ್ಲೂ ಗಂಗಾಜಲ ಪವಿತ್ರವಾಗಿದ್ಯಾ?!

Ganga Water: ಗಂಗಾಜಲ ಪರೀಕ್ಷೆ ಮಾಡಿದವನಿಗೆ ಕಾದಿತ್ತು ಶಾಕ್! ನಿಜವಾಗ್ಲೂ ಗಂಗಾಜಲ ಪವಿತ್ರವಾಗಿದ್ಯಾ?!

3 comments

Ganga Water: ಗಂಗಾ ಜಲಕ್ಕೆ (Ganga Water) ಅಪಾರ ಶಕ್ತಿ ಮಾತ್ರವಲ್ಲ ಅದೊಂದು ಪವಿತ್ರತೆಯ ಶುದ್ಧತೆಯ ಪ್ರತೀಕ. ಆದ್ರೆ ಗಂಗಾ ನದಿಯ ನೀರು ನಿಜವಾಗಲು ಎಷ್ಟು ಶುದ್ಧತೆ ಹೊಂದಿದೆ ಎಂದು ಸೂಕ್ಷ್ಮದರ್ಶಕವನ್ನು ಬಳಸಿ ಅಚ್ಚರಿಯ ವಿಚಾರವನ್ನು ಕಂಡುಕೊಂಡಿದ್ದಾರೆ.
ಅವರ ಆವಿಷ್ಕಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

ಸೂಕ್ಷ್ಮಜೀವಿಗಳು ಸಾಮಾನ್ಯವಾಗಿ ನೀರಿನಲ್ಲಿ ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಸರೋವರಗಳು, ಕೊಳಗಳು ಮತ್ತು ನದಿಗಳಂತಹ ಸಾರ್ವಜನಿಕ ನೀರು ಹೆಚ್ಚು ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಈ ಆಧಾರದ ಮೇಲೆ ವ್ಯಕ್ತಿಯೊಬ್ಬರು ಗಂಗಾ ನದಿಯ ನೀರನ್ನು ಪರೀಕ್ಷಿಸಿದ್ದಾರೆ. ಆದರೆ, ಅದರಲ್ಲಿ ಒಂದು ಸೂಕ್ಷ್ಮಜೀವಿಯೂ ಇರಲಿಲ್ಲ.

 

View this post on Instagram

 

A post shared by Ashu Ghai (@ashu.ghai)

ಹೌದು, ಯಾಕೆಂದರೆ ಗಂಗಾ ನದಿಯ ನೀರನ್ನು ಪವಿತ್ರ ನೀರು ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಗಂಗಾಜಲ ತೆಗೆದುಕೊಂಡು ಅಧ್ಯಯನ ನಡೆಸಿದ್ದಾರೆ. ಆಗ ನೀರಿನಲ್ಲಿ ಒಂದೇ ಒಂದು ಸೂಕ್ಷ್ಮಾಣು ಜೀವಿ ಇಲ್ಲದಿರುವುದನ್ನು ಕಂಡು ಆಶ್ಚರ್ಯವಾಯಿತು. ಆದರೆ, ಇದು ಸಾಧ್ಯವಿಲ್ಲ ಎಂದು ಭಾವಿಸಿದ ವ್ಯಕ್ತಿ ಈ ನೀರನ್ನು ಆ ಪ್ರದೇಶದ ಆಸ್ಪತ್ರೆಗೆ ನೀಡಿ ಪರೀಕ್ಷೆಗೆ ಒಳಪಡಿಸಿದ್ದಾರೆ.

ನಂತರ ಆಸ್ಪತ್ರೆಗಳಲ್ಲಿ ಬಳಸುವ ಅತ್ಯಾಧುನಿಕ ಪ್ರಯೋಗಾಲಯದ ಸೂಕ್ಷ್ಮದರ್ಶಕದಲ್ಲಿ ಪರಿಶೀಲಿಸಿದಾಗಲೂ ಗಂಗಾಜಲದಲ್ಲಿ ಒಂದೇ ಒಂದು ಸೂಕ್ಷ್ಮಾಣು ಜೀವಿ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಇಷ್ಟೆಲ್ಲಾ ಆದ ಮೇಲೂ ಆತ, ಗಂಗಾ ನದಿ ನೀರನ್ನು ನಾಲ್ಕು ದಿನ ಇಟ್ಟು ಪರೀಕ್ಷಿಸೋಣ ಎಂದು ನಿರ್ಧರಿಸಿ, ನಾಲ್ಕು ದಿನಗಳ ನಂತರ ನೀರನ್ನು ಪರೀಕ್ಷಿಸಿದರೆ ಆಗಲೂ ಅದರಲ್ಲಿ ಒಂದೇ ಒಂದು ಸೂಕ್ಷ್ಮಾಣು ಜೀವಿ ಬೆಳೆದಿಲ್ಲ ಎಂದು ತಿಳಿದುಬಂದಿತ್ತು. ಈ ವಿಷಯ ಬಹಿರಂಗಗೊಂಡಾಗ ಆತ ಕೂಡ ಅಚ್ಚರಿಗೆ ಒಳಗಾಗಿದ್ದು, ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

You may also like

Leave a Comment