Home » Israel and Iran: ಇಸ್ರೇಲ್- ಇರಾನ್ ಯುದ್ಧ: 60 ಜನರ ಸಾವು

Israel and Iran: ಇಸ್ರೇಲ್- ಇರಾನ್ ಯುದ್ಧ: 60 ಜನರ ಸಾವು

0 comments

Israel and Iran :ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಎರಡೂ ಕಡೆಯಿಂದ ಪರಸ್ಪರ ದಾಳಿಗಳು ನಡೆಯುತ್ತಿವೆ.

ಇಸ್ರೇಲ್‌ ತನ್ನ “ಆಪರೇಷನ್ ರೈಸಿಂಗ್ ಲಯನ್” ಕಾರ್ಯಾಚರಣೆಯಡಿಯಲ್ಲಿ ಇರಾನ್‌ದ ಪ್ರಮುಖ ಆರ್ಥಿಕ ಸ್ಥಾವರವಾದ ವಿಶ್ವದ ಅತಿದೊಡ್ಡ ಪ್ರಾಕೃತಿಕ ಅನಿಲ ಕ್ಷೇತ್ರದ ಮೇಲೆ ವಾಯುದಾಳಿ ನಡೆಸಿದೆ. ಇದರ ಪರಿಣಾಮವಾಗಿ ಇರಾನ್‌ಗೆ ಗಂಭೀರ ಹಾನಿಯಾಗಿದೆ ಎಂದು ಅಂದಾಜು.

ಇದೇ ಸಂದರ್ಭದಲ್ಲಿ, ಇಸ್ರೇಲ್‌ ಟೆಹ್ರಾನ್‌ನ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 29 ಮಕ್ಕಳು ಸೇರಿ ಒಟ್ಟು 60 ಜನರು ಮೃತಪಟ್ಟಿದ್ದಾರೆ. ಇದಕ್ಕೂ ಮುಂಚೆ ನಡೆದ ಪ್ರತ್ಯೇಕ ದಾಳಿಯಲ್ಲಿ 3 ಮಹಿಳೆಯರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸಿದ ಮೊದಲ ಎರಡು ದಿನಗಳಲ್ಲಿ ಸುಮಾರು 78 ಜನರು ಬಲಿಯಾಗಿದ್ದಾರೆ. ದಾಳಿಯಿಂದ ಕಟ್ಟಡಗಳು ನೆಲಸಮವಾಗಿದ್ದು, ಮೇಲ್ಮಹಡಿಗಳು ಉರುಳಿ ಬೀದಿಗಳನ್ನು ಮುಚ್ಚಿವೆ.

You may also like