Home » Israel Palestine War: ಸ್ವಂತ ಮಗನನ್ನೇ ಯುದ್ಧ ಭೂಮಿಗೆ ಕಳಿಸಿದ ಇಸ್ರೇಲ್ ಪ್ರಧಾನಿ ?!

Israel Palestine War: ಸ್ವಂತ ಮಗನನ್ನೇ ಯುದ್ಧ ಭೂಮಿಗೆ ಕಳಿಸಿದ ಇಸ್ರೇಲ್ ಪ್ರಧಾನಿ ?!

1 comment
Israel Palestine War

Israel Palestine War: ಕಳೆದೆರಡು ದಿನಗಳಿಂದ ನಡೆಯುತ್ತಿರವ ದಾಳಿಗೆ ಇಸ್ರೇಲ್ ನಲುಗಿ ಹೋಗಿದೆ. ಹಮಾಸ್‌ ಉಗ್ರರು ಇಸ್ರೇಲ್‌ (Israel) ನಗರದ ಒಳಗಡೆ ನುಗ್ಗಿ ಸೈನಿಕರ ಜನರ ಪ್ರಾಣ ತೆಗೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ದಾಳಿ ನಡೆಸುತ್ತಿದ್ದರೂ ಇಸ್ರೇಲ್ ಪವರ್ ಏನೇನೂ ಸಾಲದಂತಾಗಿದೆ. ಪ್ರಪಂಚದ ಬೇರೆಡೆ ಇರುವ ಇಸ್ರೇಲ್ ಪ್ರಜೆಗಳು ತಾಯ್ನಾಡಿಗೆ ಆಪತ್ತು ಎದುರಾಗಿದೆ ಎಂದು ಮರಳಿ ದೇಶದತ್ತ ಮುಖ ಮಾಡಿದ್ದಾರೆ. ಈ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಅವರು ತಮ್ಮ ಸ್ವಂತ ಮಗನನ್ನೇ ಯುದ್ಧ ಭೂಮಿಗೆ ಕಳುಹಿಸಿಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡಿ ಹರಿದಾಡುತ್ತಿದೆ.

ಹೌದು, ಮರುಭೂಮಿಯ ನಡುವಿದ್ದರೂ ಕೂಡ ಎಲ್ಲಾ ವಿಧದಲ್ಲಿಯೂ ಮುಂದುವರೆದು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಒಂದಾಗಿರುವ ಇಸ್ರೇಲ್ ಇದೀಗ ಯುದ್ದದಿಂದ ನಲುಗಿ ಹೋಗಿದೆ. ದೇಶಪ್ರೇಮಕ್ಕೆ ಹೆಸರುವಾಸಿಯಾದ ಈ ಜನ ದೇಶಕ್ಕಾಗಿ ಏನು ಮಾಡಲು ಸಿದ್ದ ಎಂಬುದು ಜಗ್ಗಜಾಹಿರಾದ ಮಾತು. ಅಂತೆಯೇ ಇದೀಗ ಅಂತದೇ ಒಂದು ಘಟನೆಗೆ ಇಸ್ರೇಲ್ ಪ್ರಧಾನಿ ಸಾಕ್ಷಿಯಾದ್ರಾ?! ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ ಅವರು ತಮ್ಮ ಸ್ವಂತ ಮಗನನ್ನೇ ಯುದ್ಧಭೂಮಿಗೆ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾದ ಫೋಟೋವೊಂದು ಈಗ ವೈರಲ್ ಆಗಿದೆ.

ಅಂದಹಾಗೆ ಫೋಟೋದ ಸತ್ಯಾಸತ್ಯತೆಯನ್ನು ಖಚಿತಪಡಿಸಿದಾಗ ಇದು 2017ರ ಫೋಟೋ ಎಂಬುದು ತಿಳಿದು ಬಂದಿದೆ. ಇಸ್ರೇಲ್‌ನಲ್ಲಿ ಪ್ರತಿಯೊಬ್ಬರಿಗೂ ಸೇನಾ ತರಬೇತಿ ಕಡ್ಡಾಯವಾಗಿದ್ದು, 2017ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮಗ ಅವ್ನೀರ್ ನೇತನ್ಯಾಹು ಈ ಸೇನಾ ತರಬೇತಿಯನ್ನು ಮುಗಿಸಿದ ವೇಳೆ ತೆಗೆದ ಫೋಟೋ ಇದು ಎಂದು ತಿಳಿದು ಬಂದಿದೆ.

ಇಸ್ರೇಲ್ ಡಿಫೆನ್ಸ್ ಸರ್ವೀಸ್‌ನಲ್ಲಿ 2017ರಲ್ಲಿಯೇ ಅವ್ನೀರ್ ನೇತನ್ಯಾಹು ಸೇನಾ ತರಬೇತಿ ಪೂರ್ಣಗೊಳಿಸಿದ್ದರು. ಅವ್ನರ್ ಯುದ್ಧ ಗುಪ್ತಚರ ಕಲೆಕ್ಷನ್ ಕಾರ್ಪ್ಸ್‌ನಲ್ಲಿ ತರಬೇತಿ ಪೂರೈಸಿ ಸೇವೆ ಸಲ್ಲಿಸಿದರು. ತಮ್ಮ ಪುತ್ರ ಈ ಸೇನಾ ತರಬೇತಿ ಪೂರ್ಣಗೊಳಿಸಿದ ಆ ಸಂದರ್ಭದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್‌ (Benjamin Netanyahu), ನಾವು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇವೆ ಹಾಗೂ ಪ್ರೀತಿಸುತ್ತೇವೆ ಎಂದು ಗಲ್ಲ ಸವರಿ ಮುದ್ದಾಡಿದ ಫೋಟೋ ಇದಾಗಿದೆ.

 

ಇದನ್ನು ಓದಿ: Body Builder: ಜಿಮ್ ಮುಗಿಸಿ ಸ್ನಾನಕ್ಕೆ ಹೋದ ಖ್ಯಾತ ಬಾಡಿ ಬಿಲ್ಡರ್ – ಸ್ನಾನ ಮಾಡುತ್ತಾ ಬಾತ್ರೂಮ್ನಲ್ಲೇ ಹೆಣವಾದ ?!!

You may also like

Leave a Comment