Bengaluru: ಇತ್ತೀಚೆಗಷ್ಟೇ ರಾಜಕಾರಣಿ ಹಾಗೂ ಖ್ಯಾತ ಚಲನಚಿತ್ರ ನಟ ಕಮಲ್ ಹಾಸನ್ ಅವರ ಥಗ್ ಲೈಫ್ ಎನ್ನುವ ಸಿನಿಮಾಗೆ ಸಂಬಂಧಪಟ್ಟ ಒಂದು ಕಾರ್ಯಕ್ರಮದಲ್ಲಿ ಮಾತಾನಾಡುತ್ತಾ ಕನ್ನಡವು ತಮಿಲಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಜೊತೆಯಲ್ಲೇ ಕುಳಿತಿದ್ದ ಶಿವರಾಜ್ ಕುಮಾರ್ ಆದರೂ ತಿದ್ದಿ ಹೇಳಬಹುದಿತ್ತು ಎಂಬುದು ಜನರಲ್ಲಿನ ಚರ್ಚೆಯಾಗಿದೆ.
ಕೆಲವೊಮ್ಮೆ ಅವಿದ್ಯಾವಂತರೆ ತಮ್ಮ ಭಾಷೆಯನ್ನು ಪ್ರೀತಿಸುತ್ತಾ, ಬೇರೆಯವರನ್ನು ತೆಗಳದೆ ಇರುವುದನ್ನು ನಾವು ನೋಡಿದ್ದೇವೆ. ಅಂಥದ್ದರಲ್ಲಿ ಇಂಥಹ ಬುದ್ಧಿ ಜೀವಿಗಳ ಈ ರೀತಿಯಾದ ನಡವಳಿಕೆ ಕೀಳರಮೆಯದ್ದಾಗಿದೆ.
ಅಷ್ಟಕ್ಕೂ ಇಲ್ಲಿ ಪ್ರತಿ ಭಾಷೆಗೂ ಅದರದ್ದೇ ಆದ ಗೌರವ ಹಾಗೂ ಇತಿಹಾಸವಿದೆ. ಎಲ್ಲರಿಗೂ ಒಪ್ಪಿತವಾಗಿರುವ ಅಧ್ಯಯನಗಳ ಪ್ರಕಾರ ಕನ್ನಡ ಭಾಷೆಯು ಪ್ರೋಟೋ-ದ್ರಾವಿಡ ಭಾಷಾ ಕುಟುಂಬದಿಂದ ಹುಟ್ಟಿದ್ದು, ಕನ್ನಡ ಹಾಗೂ ಇನ್ನಿತರ ಎಲ್ಲ ದ್ರಾವಿಡ ಭಾಷೆಗಳಿಗೂ ಸಣ್ಣ ಪುಟ್ಟ ಹೊಂದುವಂತಹ ಅಂಶಗಳು ಕೂಡ ಹಾಗೆಂದು ಒಂದರಿಂದ ಒಂದು ಹುಟ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಾತನಾಡಿದ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಟಿ ಎ ನಾರಾಯಣ ಗೌಡ ಅವರು ಕನ್ನಡದ ಅಮ್ಮ ತಮಿಳು ಅಲ್ಲ, ಸಂಸ್ಕೃತವು ಅಲ್ಲ ಎಂದಿದ್ದಾರೆ.
