Aindrita Ray: ಕನ್ನಡದ ಖ್ಯಾತ ನಟಿ ಐಂದ್ರಿತಾ ರೇ ಅವರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡುವ ಮುಖಾಂತರ ನನಗೆ ಉಸಿರಾಡಲು ಕಷ್ಟವಾಗುತ್ತಿದೆ ದಯವಿಟ್ಟು ಯಾರಾದರೂ ಹೆಲ್ಪ್ ಮಾಡಿ ಎಂದು ಜನರಲ್ಲಿ ಮೊರೆ ಇಟ್ಟಿದ್ದಾರೆ.
ಹೌದು, ಕನ್ನಡ ಚಿತ್ರರಂಗದ ನಟಿ ಬೆಂಗಳೂರಿನ ಆರ್ ಆರ್ ನಗರದ ಅಪಾರ್ಟ್ ಮೇಂಟ್ ವೊಂದರಲ್ಲಿ ವಾಸವಾಗಿರುವ ನಟಿ ಐಂದ್ರಿತಾ ರೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕಳೆದ ಮೂರು ದಿನದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ, ದಿನದಿಂದ ದಿನಕ್ಕೆ ಆರೋಗ್ಯ ಹಾಳಗುತ್ತಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಳೆದ ಮೂರು ದಿನದಿಂದ ಉಸಿರಾಟ ನಡೆಸಲು ಆಗುತ್ತಿಲ್ಲ, ಮನೆಯಲ್ಲಿ ಏನೋ ಪ್ಲಾಸ್ಟಿಕ್ ಸುಟ್ಟ ವಾಸನೆ,ಕಸ ಸುಟ್ಟ ವಾಸನೆ ಬರುತ್ತಿದೆ, ಇದರಿಂದ ಉಸಿರಾಡಲು ಕೂಡ ಸಾದ್ಯವಾಗುತ್ತಿಲ್ಲ, ತುಂಬಾ ಕಷ್ಟಪಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ವಾಸನೆ ಎಲ್ಲಿಂದ ಬರುತ್ತಿದೆ ಎಂದು ಹುಡುಕಿಕೊಂಡು ಹೋದ ನಟಿ ಅವರ ಅಪಾರ್ಟ್ ಮೇಂಟ್ ನಿಂದ ಕೆಲ ದೂರದಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ಗೆ ಬೆಂಕಿ ಹಚ್ಚಿರುವುದು ಗೊತ್ತಾಗಿದೆ, ಇದರಿಂದ ಹೋಗೆ ಉಂಟಾಗಿ ಅಕ್ಕ ಪಕ್ಕದ ಮನೆಯವರಿಗೆ ತೊಂದರೆ ಉಂಟಾಗುತ್ತಿದೆ ಹೇಳಿದ್ದಾರೆ.
https://www.instagram.com/reel/DSZtCebEuiq/?igsh=NmV2NXhoaWh1Y2I3
ಬೆಂಗಳೂರಿನಲ್ಲಿ ಯಾವುದೇ ರೀತಿಯ ಕಸವನ್ನು ಸುಡದಂತೆ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಖಡಕ್ ಆಗಿ ಆದೇಶಿಸಿದೆ, ಅದರ ನಡುವೆಯು ಬೆಂಕಿ ಹಚ್ಚಿದ್ದು, ಕೂಡಲೇ ನಟಿ ಐಂದ್ರಿತಾ ಗೂಗಲ್ ನಲ್ಲಿದ್ದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆದರೆ ಆ ನಂಬರ್ ಗೆ ಕರೆ ಕನೆಕ್ಟ್ ಆಗುತ್ತಿರಲಿಲ್ಲ. ಸದ್ಯ ಈ ಘಟನೆಯ ಬಗ್ಗೆ ನಟಿ ಆಕ್ರೋಶ ಹೊರಹಾಕಿದ್ದು,ಈ ರೀತಿಯ ಚಟುವಟಿಕೆ ನಿಲ್ಲಿಸಲು ಸಹಾಯ ಮಾಡುವಂತೆ ಹಾಗೂ ವಿಡಿಯೋ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುವಂತೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
