Home » Bigg Boss Kannada: ಹೆಣ್ಮಕ್ಕಳ ಒಳ ಉಡುಪನ್ನು ಬಿಟ್ಟಿಲ್ಲ ಜಗದೀಶ್! ಕೆಟ್ಟದಾಗಿ ವರ್ತಿಸುತ್ತಿರುವ ಲಾಯರ್ ಹೇಳಿದ್ದೇನು?

Bigg Boss Kannada: ಹೆಣ್ಮಕ್ಕಳ ಒಳ ಉಡುಪನ್ನು ಬಿಟ್ಟಿಲ್ಲ ಜಗದೀಶ್! ಕೆಟ್ಟದಾಗಿ ವರ್ತಿಸುತ್ತಿರುವ ಲಾಯರ್ ಹೇಳಿದ್ದೇನು?

0 comments

Bigg Boss Kannada: ಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್​ ಸೀಸನ್​ 11ರ ಆರಂಭದಲ್ಲೇ ಸ್ವರ್ಗ-ನರಕ ಕಾಂಪಿಟೇಷನ್ ಫೈಟ್ ​ ಕೂಡ ಜೋರಾಗಿದೆ. ಇದರ ನಡುವೆ ಲಾಯರ್ ಜಗದೀಶ್​ ಬಿಗ್ ಬಾಸ್( Bigg Boss Kannada) ಮನೆಯಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದು, ಮನೆಯವರ ಕೋಪಕ್ಕೆ ಕಾರಣವಾಗುತ್ತಿದ್ದಾರೆ. ಹೌದು, ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದ ಲಾಯರ್ ಜಗದೀಶ್​ ಇದೇ ವೇಳೆ ಹೆಣ್ಮಕ್ಕಳ ಒಳ ಉಡುಪಿನ ಬಗ್ಗೆ ಅಸಭ್ಯ ಕಮೆಂಟ್ ಮಾಡಿದ್ದು ಎಲ್ಲರೂ ಶಾಕ್ ಆಗಿದ್ದಾರೆ.

ಕ್ಯಾಪ್ಟನ್ ಟಾಸ್ಕ್ ವಿಷ್ಯದಲ್ಲಿ ನೀನ್ ಮಾಡ್ತಿರೋದು ನನಗೆ ಗೊತ್ತಿದೆ ಎಂದು ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದ ಜಗದೀಶ್, ಗ್ಯಾಂಗ್ ಕಟ್ಟಿದ್ಯಾ? ನಾನು ಕೂಡ ಪ್ಲೇಯರ್, ಈ ಆಟ ನನಗೂ ಆಡಲು ಬರುತ್ತೆ. ಚಿಲ್ಲರೆ ಗೇಮ್ ಅಲ್ಲ, ಚೆಕ್ ಮೇಟ್ ಆಡ್ತೀನಿ. ನಿನಗೆ ಬುದ್ದಿ ಕಲಿಸದಿದ್ರೇ, ನಾನು ನಮ್ಮ ಅಪ್ಪನ ಮಗನೇ ಅಲ್ಲ, ನಾನು ಲಾಯರ್​​ ಜಗದೀಶ್ ಅಲ್ವೇ ಅಲ್ಲ. ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ, ನಾನು ರಿಯಲ್ ಉಗ್ರಂ ನಿನಗೆ ತೋರಿಸುತ್ತೇನೆ ಎಂದು ಜಗದೀಶ್​ ಕೋಪದಲ್ಲಿ ಮಾತಾಡಿದ್ರು.

ಬಳಿಕ ಮಂಜು ಬ್ರೋ… ಬ್ರೋ..ಅಂತಿದ್ದಂತೆ, ನಾನು ಎಲ್ಲಾ ನೋಡಿದ್ದೇನೆ ಎಂದ ಜಗದೀಶ್​, ಹೆಣ್ಮಕ್ಕಳ ಒಳ ಉಡುಪಿನ ಬಗ್ಗೆ, ನನ್ನ ಹೆಂಡತಿ ಕೂಡ ಹಾಕೋದು ಅದನ್ನೇ ಎಂದು ಅಸಭ್ಯವಾಗಿ ಮಾತಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಹೆಣ್ಮುಕ್ಕಳಿಗೆ ಲಾಯರ್ ಜಗದೀಶ್ ಮಾತಿನಿಂದ ಮುಜುಗರವಾಗಿದೆ.

ಈ ಕುರಿತು ಲಾಯರ್ ಮಿತಿ ಮೀರಿ ಮಾತಾಡಿದ್ದಾರೆ. ಹೆಣ್ಮಕ್ಕಳ ವೈಯಕ್ತಿಕ ವಿಚಾರ ಎಂದು ಶಿಕ್ಷೆ ನೀಡಿ ಎಂದು ಭವ್ಯ ಹೇಳಿದ್ದು, ಈ ಲಾಯರ್ ಮುಂದೆ ಓಡಾಡಲು ಭಯವಾಗ್ತಿದೆ ಎಂದು ಐಶ್ವರ್ಯಾ ಕೂಡ ಹೇಳಿದ್ದಾರೆ. ಒಟ್ಟಿನಲ್ಲಿ ಅನ್ಯಾಯ, ಹೋರಾಟ ಎನ್ನುವ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ನಾಲಿಗೆ ಹರಿಬಿಟ್ಟು ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಆದ್ರೆ ಕೆಲ ನಿಮಿಷಗಳ ಬಳಿಕ ಜಗದೀಶ್ ಎಲ್ಲರ ಮುಂದೆ ಬಂದು ನನ್ನ ಮಾತಿನಿಂದ ಯಾರಿಗಾದ್ರು ಬೇಸರವಾಗಿದ್ರೆ ಕ್ಷಮಿಸಿ ಎಂದಿದ್ದಾರೆ. ಇದಕ್ಕೆ ಮನೆಯಲ್ಲಿ ಯಾರು ಪ್ರತಿಕ್ರಿಯೆ ನೀಡದೆ, ಇದೊಂದು ನಾಟಕ ಎಂಬಂತೆ ಅವರನ್ನು ನೋಡಿ ಸುಮ್ಮನಾಗಿದ್ದಾರೆ.

You may also like

Leave a Comment