2
Jaipur: ಮಹಾಕುಂಭ ಮೇಳದಲ್ಲಿ ಭಾರೀ ಗಮನ ಸೆಳೆದಿದ್ದ ಐಐಟಿ ಬಾಬಾ ಅಭಯ್ ಸಿಂಗ್‌ನನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ.
ಅಭಯ್ ಸಿಂಗ್ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ.
ಗಾಂಜಾ ಸೇವನೆ ಮಾಡುವ ಆರೋಪವಿದ್ದು, ಎನ್‌ಡಿಪಿಎಸ್ ಆಕ್ಟ್ ಅಡಿ ಐಐಟಿ ಬಾಬಾ ಅಭಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಬಾಬಾನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬಾಂಬೆ ಐಐಟಿ ಹಳೆ ವಿದ್ಯಾರ್ಥಿಯಾಗಿರುವ ಅಭಯ್ ಸಿಂಗ್, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭ ಮೇಳದಲ್ಲಿ ಐಐಟಿ ಬಾಬಾ ಎಂದೇ ಭಾರೀ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು.
