Home » Food: ಜಿಲೇಬಿಗೂ ತಟ್ಟಲಿದೆ ಗುಣಮಟ್ಟ ತಪಾಸಣೆ ಬಿಸಿ

Food: ಜಿಲೇಬಿಗೂ ತಟ್ಟಲಿದೆ ಗುಣಮಟ್ಟ ತಪಾಸಣೆ ಬಿಸಿ

0 comments

Food News: ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಜಿಲೇಬಿ ಮತ್ತು ಶರಬತ್ತುಗಳಲ್ಲಿ ಕೃತಕ ಬಣ್ಣ ಬಳಸುತ್ತಿರುವುದರ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಮಾದರಿ ಪರೀಕ್ಷೆಗೆ ಮುಂದಾಗಿದೆ.

ರಾಜ್ಯದ ಹಲವು ಭಾಗಗಳಲ್ಲಿ ಜಿಲೇಬಿ ಮತ್ತು ಶರಬತ್ತುಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಪ್ರತಿ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಐದು ಜಿಲೇಬಿ ಮಾದರಿ ಮತ್ತು ಐದು ಶರಬತ್ತು ಮಾದರಿಗಳನ್ನು ಸಂಗ್ರಹಿಸಿ ಮೂರು ದಿನಗಳೊಳಗೆ ವಿಶ್ಲೇಷಣೆ ಮಾಡಿ ವರದಿ ನೀಡುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಸೂಚನೆ ನೀಡಿದ್ದಾರೆ.

ಆಯಾ ಜಿಲ್ಲಾ ಅಂಕಿತಾಧಿಕಾರಿಗಳು ಮಾದರಿಯನ್ನು ತಮ್ಮ ವಿಭಾಗದ ಸರಕಾರಿ ಅಹಾರ ಪ್ರಯೋಗಾಲಯಗಳಿಗೆ ಕಳುಹಿಸಲು ಸೂಚನೆ ನೀಡಲಾಗಿದೆ. ವರದಿ ಬಂದ ತಕ್ಷಣ ಕೇಂದ್ರ ಕಚೇರಿಗೆ ಕಳುಹಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ. ಆಹಾರ ಇಲಾಖೆ ಈಗಾಗಲೇ ಸಾಕಷ್ಟು ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದು, ಗುಣಮಟ್ಟವಿಲ್ಲದ ಪದಾರ್ಥಗಳ ನಿಷೇಧ ಮಾಡಿದೆ. ಅಲ್ಲದೆ ಮಾರಾಟಗಾರರ ವಿರುದ್ಧ ಕ್ರಮ ತೆಗೆದುಕೊಂಡಿದೆ.

You may also like