Home » ʻಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿʼ : ಸಹೋದರ ಮಹಮ್ಮದ್ ಬೇಸರ

ʻಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿʼ : ಸಹೋದರ ಮಹಮ್ಮದ್ ಬೇಸರ

0 comments

ಮಂಗಳೂರು : ​ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಮಹಮ್ಮದ್ ಮಾತನಾಡಿ, ಆತ ಗಲಾಟೆಗೆ ಹೋಗದ ಬಡಪಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಜಲೀಲ್ ಸಹೋದರ ಮಹಮ್ಮದ್ ಮಾತನಾಡಿ, ಅವನು ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ಬೆಳಿಗ್ಗೆ ಅಂಗಡಿಗೆ ಬಂದು ವ್ಯವಹಾರ ಮಾಡಿ ರಾತ್ರಿ ಮನೆಗೆ ಹೋಗುತ್ತಿದ್ದ. ಆತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದನು.

ಯಾರ ಜೊತೆಗೂ ಜೋರಾಗಿಯೂ ಮಾತನಾಡದಂತ ಅವನನ್ನೇ ಹತ್ಯೆ ಮಾಡಿದ್ದಾರೆ. ಆತ ಯಾವುದೇ ಸಂಘಟನೆ, ರಾಜಕೀಯದಲ್ಲೂ ಇರಲಿಲ್ಲ. ಸುಮಾರು 10-15 ವರ್ಷದಿಂದ ಅವನು ಆದೇ ಅಂಗಡಿ ನಡೆಸುತ್ತಿದ್ದನು.

ಜಲೀಲ್‌ ಕಾಟಿಪಳ್ಳ ನಾಲ್ಕನೇ ಬ್ಲಾಕ್‍ನಲ್ಲಿ ಪತ್ನಿ ಮತ್ತು ಮಗನ ಜೊತೆ ಮನೆಯಲ್ಲಿ ವಾಸವಾಗಿದ್ದನು. ಯಾರ ತಂಟೆಗೆ ಹೋಗದ ಆತನನ್ನೇ ಇಬ್ಬರು ಬೈಕ್‍ನಲ್ಲಿ ಬಂದು ಕೊಲೆ ಮಾಡಿ ಹೋಗಿದ್ದಾರೆ ಎಂದು ಸಹೋದರ ಕಣ್ಣೀರು ಹಾಕುತ್ತ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಜಲೀಲ್ ಅನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ತಿಳಿಯಬೇಕಿದೆ.

You may also like

Leave a Comment