Home » Jammu-Kashmir: ನಮ್ಮ ಊರಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದರೆ ಸುಟ್ಟುಬಿಡ್ತೇವೆ ಹುಷಾರ್ – ಕಾಶ್ಮೀರಿ ಮುಸ್ಲಿಂ ವ್ಯಕ್ತಿಯಿಂದ ಬೆದರಿಕೆ

Jammu-Kashmir: ನಮ್ಮ ಊರಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದರೆ ಸುಟ್ಟುಬಿಡ್ತೇವೆ ಹುಷಾರ್ – ಕಾಶ್ಮೀರಿ ಮುಸ್ಲಿಂ ವ್ಯಕ್ತಿಯಿಂದ ಬೆದರಿಕೆ

0 comments

Jammu-Kashmirದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಪತ್ರಕರ್ತೆ ಹೋಗಿದ್ದರು. ಈ ವೇಳೆ ಆ ಪತ್ರಕರ್ತೆಗೆ ಜೀವಬೆದರಿಕೆ ಇಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಹೌದು, ಮುಷ್ತಾಕ್ ಎಂಬ ವ್ಯಕ್ತಿ ಪತ್ರಕರ್ತೆಗೆ ಬೆದರಿಕೆ ಒಡ್ಡಿದ್ದಲ್ಲದೆ, ನಮ್ಮ ಊರುಗಳಲ್ಲಿ ದೇವಾಲಯಗಳನ್ನು ಕಟ್ಟಿದರೆ ನಾವು ಅದಕ್ಕೆ ಬೆಂಕಿ ಇಡುತ್ತೇವೆ. ನಮ್ಮ ಧರ್ಮ ತತ್ವಗಳಿಗೆ ವಿರುದ್ಧವಾಗಿ ನಡೆದರೆ ಸುಮ್ಭನಿರಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಪತ್ರಕರ್ತೆಯು ಆತನನ್ನು ಮಾತನಾಡಿಸವಾಗ ಆತ ‘ನಮ್ಮ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದನ್ನು ನಾನು ಒಪ್ಪಲಾರೆ. ಒಂದು ವೇಳೆ ದೇವಾಲಯ ನಿರ್ಮಿಸಿದರೆ ಅದನ್ನು ನಾನು ಸುಟ್ಟು ಬಿಡುತ್ತೇನೆ. ನಾನೊಬ್ಬ ಮುಸಲ್ಮಾನನಾಗಿದ್ದು, ಅಧರ್ಮಿಗಳ ನಡುವೆ ಬದುಕುವುದು ಕಷ್ಟವಾಗುತ್ತದೆ. ಅದನ್ನು ಒಪ್ಪಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾನೆ.

ಅಲ್ಲದೆ ಇಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಇಲ್ಲಿ ಬಿಜೆಪಿಗರು ಮಸೀದಿಗಳ ಮುಂದೆ ದೇವಾಲಯಗಳನ್ನು ನಿರ್ಮಿಸಲು ಪ್ರಾರಂಭಿಸಿದಾಗಿನಿಂದ ಅವರು ನಮ್ಮಧರ್ಮದ ತತ್ವಗಳಿಗೆ ವಿರುದ್ಧವಾಗಿ ಮದ್ಯದ ಅಂಗಡಿಗಳನ್ನು ಸಹ ತೆರೆಯಲು ಪ್ರಾರಂಭಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಈ ವರದಿಯನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಪತ್ರಕರ್ತೆಗೆ ಜೀವ ಬೆದರಿಕೆಗಳು ಬಂದಿವೆ. ಕೆಲವರು ಆಕೆಯ ವಿರುದ್ಧ ತಿರುಗಿಬಿದ್ದಿದ್ದು, ಇಂತಹ ಸಂಕುಚಿತ ಮನಸ್ಸಿನ ಜನರ ಸಂದರ್ಶನಗಳನ್ನು ಆಯ್ದುಕೊಂಡು ಕಾಶ್ಮೀರಕ್ಕೆ ಕಳಂಕ ತರುವ ರೀತಿಯಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

You may also like

Leave a Comment