ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ ಜ.22 ರಂದು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ತಿಳಿಸಿದ್ದಾರೆ.
ಬೆಳಿಗ್ಗೆ 8.00ರಿಂದ 108 ಕಾಯಿ ಗಣಹೋಮ ಮತ್ತು ಅಥರ್ವಶೀರ್ಷಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ರಾತ್ರಿ ಗಂಟೆ 7.30ರಿಂದ ಮೂಡಪ್ಪಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಬೆಳಗ್ಗೆ ಶ್ರೀ ವಾಮನ್ ನಾಯಕ್ ಉಪ್ಪಿನಂಗಡಿ ಇವರ ಸಂಯೋಜನೆಯಲ್ಲಿ ಆಸಕ್ತ ವಿವಿಧ ಭಜನಾ ತಂಡಗಳಿಂದ “ಭಜನಾ ಸೇವೆ”, ಸಂಜೆ ಶ್ರೀ ಕ್ಷೇತ್ರ ಸೌತಡ್ಕದ ಶಿಶುಮಂದಿರದ ಪುಟಾಣಿ ವಿದ್ಯಾರ್ಥಿಗಳಿಂದ “ಚಿಣ್ಣರ ಚಿಲಿಪಿಲಿ” ಸಾಯಂಕಾಲ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ ನಿರ್ದೇಶನದ ಪುನೀತ್ ಆರ್ಕೆಸ್ಟ್ರಾ -ಪುತ್ತೂರು ಇವರಿಂದ “ಭಕ್ತಿ ಸಿಂಚನ”, ರಾತ್ರಿ ನರೇಶ್ ಕುಮಾರ್ ಸಸಿಹಿತ್ತು ನಿರ್ದೇಶನದ ತುಳು ನಾಟಕ “ಬ್ರಹ್ಮ ರಕ್ಕಸ” ನಡೆಯಲಿದೆ.













