Home News ಜ.23-24: ಎಸ್ ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

ಜ.23-24: ಎಸ್ ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

0
4

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಭಾಗಗಳು ಆಯೋಜಿಸಲಿರುವ ಜೀವ ವಿಜ್ಞಾನದ ಉದಯೋನ್ಮುಖ ಸಂಶೋಧನೆಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಜ.23 ಮತ್ತು 24ರಂದು ನಡೆಯಲಿದೆ. ಸಮ್ಮೇಳನವನ್ನು ಡಿಆರ್‌ಡಿಒ, ನವದೆಹಲಿಯ ನಿರ್ದೇಶಕ ಡಾ. ಸಂಜಯ್ ಕುಮಾ‌ರ್ ದ್ವಿವೇದಿ ಅವರು ಉದ್ಘಾಟಿಸಿ, ದಿಕ್ಕೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅವಿನಾಶ್ ರಾವ್ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಾಚಾರ್ಯ ಪ್ರೊ. ವಿಶ್ವನಾಥ ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.