Home » Janardhan Reddy: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ; ಜನಾರ್ಧನ ರೆಡ್ಡಿ ದೋಷಿ!

Janardhan Reddy: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ; ಜನಾರ್ಧನ ರೆಡ್ಡಿ ದೋಷಿ!

0 comments
Janardana Reddy

Janardhan Reddy: ಓಬಳಾಪುರಂ ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯವು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ದೋಷಿ ಎಂದು ತೀರ್ಪು ನೀಡಿದೆ.

ಮಾಜಿ ಸಚಿವ ಮತ್ತು ಹಾಲಿ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ, ಬಿ.ವಿ.ಶ್ರೀನಿವಾಸ ರೆಡ್ಡಿ, ಮೆಫಾಜ್‌ ಆಲಿ ಖಾನ್‌, ವಿ.ಡಿ.ರಾಜಗೋಪಾಲ್‌, ಕೃಪಾನಂದಂ, ಸಬಿತಾ ಇಂದ್ರಾ ರೆಡ್ಡಿ, ವೈ ಶ್ರೀ ಲಕ್ಷ್ಮೀ, ದಿವಂಗತ ಆರ್.‌ ಲಿಂಗಾ ರೆಡ್ಡಿ ಈ ಪ್ರಕರಣದ ಆರೋಪಿಗಳು. ಇವರ ವಿರುದ್ಧ ಐಪಿಸಿ ಸೆಕ್ಷನ್‌ 120ಬಿ, 420, 409,468,471 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

 

You may also like