Home » ಕೆದಂಬಾಡಿ ಯುವರಂಗದ ಮಾಜಿ ಅಧ್ಯಕ್ಷ, ಕುಂಬ್ರ ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಜಯರಾಮ ಗೌಡ ಇನ್ನಿಲ್ಲ

ಕೆದಂಬಾಡಿ ಯುವರಂಗದ ಮಾಜಿ ಅಧ್ಯಕ್ಷ, ಕುಂಬ್ರ ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಜಯರಾಮ ಗೌಡ ಇನ್ನಿಲ್ಲ

by Praveen Chennavara
0 comments

ಕೆದಂಬಾಡಿ : ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಮುಂಡಾಲ ದಿ. ಹೊನ್ನಪ್ಪ ಗೌಡರ ಪುತ್ರ ಜಯರಾಮ ಗೌಡ (42) ಅವರು ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕುಂಬ್ರ ಪೆಟ್ರೋಲ್ ಪಂಪ್ ಸಮೀಪ ಟಯರ್ ವರ್ಕ್ ಶಾಪ್ ನಡೆಸುತ್ತಿದ್ದ ಇವರು,ಕೆದಂಬಾಡಿ ಯುವ ರಂಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಕುಂಬ್ರ ಯುವ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ, ಕೆದಂಬಾಡಿ ಗ್ರಾಮದ ಇದ್ಪಾಡಿಯ ಶಿರಾಡಿ ಭಕ್ತವೃಂದದ ಕೋಶಾಧಿಕಾರಿಯಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.ವಿದೇಶದಲ್ಲಿ ಕೆಲ ವರ್ಷಗಳ ಕಾಲ ಉದ್ಯೋಗ ನಿರ್ವಹಿಸಿ ಬಳಿಕ ಊರಿಗೆ ಬಂದು ಟಯರ್ ವರ್ಕ್ ಶಾಪ್ ನಡೆಸುತ್ತಿದ್ದರು.ಕ್ರೀಡಾಕೂಟದಲ್ಲಿ ಹೆಚ್ಚಾಗಿ ಆಸಕ್ತಿ ಹೊಂದಿದ್ದರು,ಸಮಾಜದಲ್ಲಿ ಎಲ್ಲರೊಡನೆ ಸ್ನೇಹಜೀವಿಯಾಗಿ ಗುರುತಿಸಿಕೊಂಡಿದ್ದಾರೆ.

ಮೃತರು ತಾಯಿ ಚಂದ್ರಾವತಿ, ಪತ್ನಿ ಇಬ್ಬರು ಮಕ್ಕಳು,ಸಹೋದರ ಪದ್ಮನಾಭ ಅವರನ್ನು ಅಗಲಿದ್ದಾರೆ.

You may also like

Leave a Comment