Home » JDS: ಕೋರ್‌ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ರೇವಣ್ಣರನ್ನು ಸ್ಟಾರ್‌ ಪ್ರಚಾರಕರ ಲಿಸ್ಟ್‌ನಿಂದ ಹೊರಗಿಟ್ಟ ಜೆಡಿಎಸ್‌

JDS: ಕೋರ್‌ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ರೇವಣ್ಣರನ್ನು ಸ್ಟಾರ್‌ ಪ್ರಚಾರಕರ ಲಿಸ್ಟ್‌ನಿಂದ ಹೊರಗಿಟ್ಟ ಜೆಡಿಎಸ್‌

0 comments

Jds: ಕರ್ನಾಟಕದ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಇದೇ ನವೆಂಬರ್‌ 13 ರಂದು ನಡೆಯಲಿದೆ. ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ನಾಯಕರು ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಲಿಸ್ಟ್‌ನಲ್ಲಿ ಕೋರ್‌ ಕಮಿಟಿ ಅಧ್ಯಕ್ಷರನ್ನೇ ಕೈ ಬಿಡಲಾಗಿದೆ. ಅಲ್ಲದೇ ಶಾಸಕ ಎಚ್‌ಡಿ ರೇವಣ್ಣ ಅವರಿಗೂ ಶಾಕ್‌ ನೀಡಿದೆ.

ಒಟ್ಟು ನಲವತ್ತು ನಾಯಕರನ್ನು ಒಳಗೊಂಡ ಪಟ್ಟಿ ಇದಾಗಿದ್ದು, ಇದರಲ್ಲಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಸೇರಿ ಹಲವರ ಹೆಸರಿದೆ. ಆದರೆ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರ ಹೆಸರು ಇಲ್ಲ, ಇದಕ್ಕೆ ಕಾರಣವಿದೆ.

ಜೆಡಿಎಸ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗದೇ ಇದ್ದ ಸಂದರ್ಭದಲ್ಲಿ ಜಿ.ಟಿ.ದೇವೇಗೌಡ ಅವರು ಬೇಸರಗೊಂಡಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಪರವಾಗಿ ಮೈಸೂರು ಮೂಡಾ ಹಗರಣಕ್ಕೆ ಕುರಿತು ಮಾತನಾಡಿದ್ದರು. ನಂತರ ಮೈಸೂರು ದಸರಾದಲ್ಲಿ ರಾಜೀನಾಮೆ ವಿಚಾರ ಕೂಡಾ ಮಾತನಾಡಿ ಸಿದ್ದರಾಮಯ್ಯ ಪರ ಹೇಳಿಕೆ ನೀಡಿದ್ದರು. ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲಾ ಕಾರಣಗಳಿಂದ ಸ್ಟಾರ್‌ ಕ್ಯಾಂಪೇನ್‌ ಪಟ್ಟಿಯಿಂದ ಇವರ ಹೆಸರನ್ನು ಕೈ ಬಿಡಲಾಗಿದೆ.

ಇನ್ನು ಎಚ್‌ ಡಿ ರೇವಣ್ಣ. ಇವರ ಕುಟುಂಬದ ಮೇಲೆ ಹಲವು ಆರೋಪಗಳು ಕೇಳಿ ಬಂದ ಕಾರಣ ಅವರನ್ನು ಕೂಡಾ ಸ್ಟಾರ್‌ ಪ್ರಚಾರಕರನ್ನಾಗಿ ಆಯ್ಕೆ ಮಾಡಿಲ್ಲ

You may also like

Leave a Comment