4
Dakshina Kannada: ಪಟ್ರಮೆಯ ಪಟ್ಟೂರು ಪುಂಡಿಕಾಯಿ ತಿರುವಿನಲ್ಲಿ ಗೂಡ್ಸ್ ರಿಕ್ಷಾ ಮತ್ತು ಜೀಪು ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಜೀಪ್‌ನಲ್ಲಿದ್ದ ಸುಂದರಿ, ಗಿರಿಜಾ, ಲಲಿತಾ ಮತ್ತು ರಿಕ್ಷಾ ಡ್ರೈವರ್‌ಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಇವರನ್ನು ಕೂಡಲೇ ಕೊಕ್ಕಡ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಲ್ಲಿಗೆ ಮಜಲು ಸಿದ್ದಿಕ್ ಎಂಬುವರಿಗೆ ಸೇರಿದ ರಿಕ್ಷಾ ಇದಾಗಿದ್ದು, ಜೀಪ್ ದಿಡುಪೆಯಿಂದ ಮಾಡವು ಕಡೆಗೆ ಕಾರ್ಯಕ್ರಮದ ನಿಮಿತ್ತ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
