Home » Hafisul Hasan: ಮೊದಲು ಶರಿಯತ್ ಆಮೇಲೆ ಸಂವಿಧಾನ- ಕಲ್ಯಾಣ ಇಲಾಖೆ ಸಚಿವ

Hafisul Hasan: ಮೊದಲು ಶರಿಯತ್ ಆಮೇಲೆ ಸಂವಿಧಾನ- ಕಲ್ಯಾಣ ಇಲಾಖೆ ಸಚಿವ

0 comments

Hafisul Hasan: ಜಾರ್ಖಂಡ್‌ನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಹಫೀಜುಲ್ ಹಸನ್ ಅವರು, ಮುಸ್ಲಿಮರಿಗೆ ಮೊದಲು ಶರಿಯತ್ ಮುಖ್ಯ. ನಂತರ ದೇಶದ ಸಂವಿಧಾನ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಅವರ ಈ ಹೇಳಿಕೆ ತೀವ್ರ ವಿವಾದಾದಕ್ಕೆ ಕಾರಣವಾಗುತ್ತಿದ್ದಂತೆ ಹಸನ್ ನಾನು‌ ಹಾಗೆ ಹೇಳಿಲ್ಲ ಎನ್ನುವ ಕೆಲಸವನ್ನೂ ಮಾಡಿದ್ದಾರೆ.

ಫಸ್ಟ್, ಶರಿಯತ್ ಬಳಿಕ ದೇಶದ ಸಂವಿಧಾನ ಎಂದು ಹೇಳಿದ್ದಾರೆ ಹಸನ್. ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ, ಸಂವಿಧಾನ ಮತ್ತು ಶರಿಯತ್ ಎರಡೂ ಸಮಾನವಾಗಿ ಮುಖ್ಯ ಎಂದು ಮಾಧ್ಯಮಗಳಿಗೆ ನಂತರ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ವಿಪಕ್ಷಗಳು ತಿರುಚಿವೆ ಎನ್ನುವ ಆರೋಪವನ್ನು ಮಾಡಿದ್ದಾರೆ.

 

You may also like