Home » ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶ್ರೀಮತಿ ಸುಚೇತಾ ಇವರಿಗೆ ಯುವಕೇಸರಿ ಗಡಿಯಾರ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶ್ರೀಮತಿ ಸುಚೇತಾ ಇವರಿಗೆ ಯುವಕೇಸರಿ ಗಡಿಯಾರ ವತಿಯಿಂದ ಅಭಿನಂದನಾ ಕಾರ್ಯಕ್ರಮ

0 comments

ಅಧ್ಯಾಪಕ ವೃಂದ, ಯುವ ಕೇಸರಿ ಗಡಿಯಾರ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಗಡಿಯಾರ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಚೇತಾ ಇವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಸುಚೇತಾ ಅವರು ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸಮುದಾಯವನ್ನು ಸಮರ್ಥವಾಗಿ ಬಳಸಿ, ಶಿಕ್ಷಣಕ್ಕೆ ಆಧುನಿಕ ಸ್ಪರ್ಶ ನೀಡಿ, ಶಾಲೆಯಲ್ಲಿ ವ್ಯವಸ್ಥಿತ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಕಲಿಕಾ ಕೊಠಡಿ, ಸ್ಮಾರ್ಟ್ ಕ್ಲಾಸ್, ಸಭಾಭವನ,ವಿಶಾಲವಾದ ಆಟದ ಮೈದಾನ, ಶಾಲಾವನ ಹೀಗೆ ಹತ್ತು ಹಲವು ಕಲಿಕಾ ಸ್ನೇಹಿ ವ್ಯವಸ್ಥೆಗಳನ್ನು ದಾನಿಗಳ ಸಹಕಾರದಿಂದ ಮಾಡಿದ್ದಾರೆ.

ಕೇವಲ 5 ವರ್ಷಗಳಲ್ಲಿ 83 ಲಕ್ಷದಷ್ಟು ವಿವಿಧ ಅನುದಾನಗಳನ್ನು ಶಾಲೆಗೆ ತರಿಸಿ, ಸಮರ್ಥವಾಗಿ ಬಳಸಿದ, ಸರಳ ನಿರ್ಗವಿ ಕಲಿಕಾ ಚೇತನ ಜೊತೆಗೆ ಉತ್ಸಾಹಿ ಕೂಡ ಆಗಿದ್ದಾರೆ. ಊರಿನ ಮೆಚ್ಚುಗೆಯ ಶಿಕ್ಷಕಿಯಾದ ಇವರಿಗೆ 2021/22ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿಯಾಗಿ ಆಯ್ಕೆಯಾಗಿರುವುದಕ್ಕೆ ಯುವ ಕೇಸರಿ ಗಡಿಯಾರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇವರ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

You may also like

Leave a Comment