Home » Jio ಗ್ರಾಹಕರೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್ | 365 ದಿನಕ್ಕೆ ಸಿಗಲಿದೆ ಅತ್ಯುತ್ತಮ ಬಂಪರ್ ಆಫರ್

Jio ಗ್ರಾಹಕರೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್ | 365 ದಿನಕ್ಕೆ ಸಿಗಲಿದೆ ಅತ್ಯುತ್ತಮ ಬಂಪರ್ ಆಫರ್

0 comments

ಕಳೆದ ಕೆಲ ವರ್ಷಗಳ ಹಿಂದೆ ಭಾರತಿ ಏರ್ಟೆಲ್, ಬಿ.ಎಸ್. ಎನ್ಎಲ್ ಟೆಲಿಕಾಮ್ ಗಳನ್ನು ಹಿಂದಿಕ್ಕಿ, ಫ್ರೀ ಕಾಲ್, ಫ್ರೀ ಸಿಮ್ ಕಾನ್ಸೆಪ್ಟ್ ಮೂಲಕ ಎಂಟ್ರಿ ಕೊಟ್ಟ ಜಿಯೋ ಸಿಮ್ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿ, ಕಿಕ್ಕಿರಿದು ಜನ ಸಿಮ್, ಜಿಯೋ ಮೊಬೈಲ್ ತೆಗೆದುಕೊಳ್ಳುವಂತೆ ಮಾಡಿ ಜನರ ಮೆಚ್ಚಗೆಗೆ ಪಾತ್ರವಾಗಿದ್ದು ,ಹಳೆಯ ವಿಚಾರವಾದರೂ ಈಗಲೂ ಜಿಯೋ ಸಿಮ್ ನ ಬಳಕೆದಾರರನ್ನು ಸೆಳೆಯಲು ವಿಭಿನ್ನ ಶೈಲಿಯಲ್ಲಿ ತಂತ್ರಗಳನ್ನು ಹೆಣೆಯುತ್ತಿದೆ.

ಜನಪ್ರಿಯವಾಗಿರುವ ಜಿಯೋ ತನ್ನ ಗ್ರಾಹಕರನ್ನು ಗುರಿಯಾಗಿಸಿಕೊಂಡು ರೀಚಾರ್ಜ್‌ ಪ್ಲಾನ್‌ ತಂದಿದ್ದು ,
2,545 ರೂ ರೀಚಾರ್ಜ್ ಪ್ಲಾನ್, ಈ ಯೋಜನೆಯಲ್ಲಿ ಜಿಯೋ ಗ್ರಾಹಕರು ಅನಿಯಮಿತ ಕರೆಗಳು, ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 SMS ಸಿಗಲಿದೆ. ಇದಲ್ಲದೆ, ಯೋಜನೆಯಲ್ಲಿ ಗ್ರಾಹಕರಿಗೆ ಅನೇಕ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ. ಈ ಯೋಜನೆಯು ಒಂದು ವರ್ಷಕ್ಕೆ ಮಾನ್ಯತೆ ಹೊಂದಿದ್ದು, ಒಮ್ಮೆ ರೀಚಾರ್ಜ್ ಮಾಡಿದರೆ ವರ್ಷಪೂರ್ತಿ ಇದರ ಉಪಯೋಗ ಪಡೆಯಬಹುದು.

ಜಿಯೋದ ಅತ್ಯಂತ ಹೆಚ್ಚಿನ ಬೆಲೆಯ ಯೋಜನೆಯಾಗಿದ್ದು, 2,999 ರೂ. ರೀಚಾರ್ಜ್ ಪ್ಲಾನ್ ಆಗಿದ್ದು, ವರ್ಷಪೂರ್ತಿ ವ್ಯಾಲಿಡಿಟಿಯನ್ನು ಹೊಂದಿದೆ. ಇದಕ್ಕಾಗಿ 3000 ರೂ. ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ, ಗ್ರಾಹಕರಿಗೆ ಅನಿಯಮಿತ ಕರೆಯೊಂದಿಗೆ ಪ್ರತಿದಿನ 2.5GB ಡೇಟಾ ಮತ್ತು 100 SMS ನೀಡಲಾಗುತ್ತದೆ. ಈ ಯೋಜನೆಯಲ್ಲಿ, ಗ್ರಾಹಕರಿಗೆ ಕೆಲವು ಟ್ರೆಂಡಿಂಗ್ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಕೊಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಂ, ಮಕ್ಕಳಿಗೆ ಮನೆಯಲ್ಲೆ ಆನ್ಲೈನ್ ಕ್ಲಾಸ್ ಹೀಗೆ ನಾನಾ ಕಾರಣದಿಂದ ಇಂಟರ್ನೆಟ್ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಜಿಯೋ ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ರೀಚಾರ್ಜ್ ಪ್ಲಾನ್ ತಂದಿದ್ದು, ಗ್ರಾಹಕರಿಗೆ ಇಂಟರ್ನೆಟ್ ಬಳಕೆಗೆ ನೆರವಾಗಲಿದೆ.

You may also like

Leave a Comment