ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್, ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನೂ ನೀಡುತ್ತಿದೆ. ಸದ್ಯ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕೇವಲ ₹ 895 ರೂ.ಗಳಿಗೆ 1 ವರ್ಷದ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ 4G ಡೇಟಾ ಮತ್ತು ಕರೆಗಳನ್ನು ನೀಡುತ್ತಿದೆ. ಈ ರಿಜಾರ್ಜ್ ಪ್ಲ್ಯಾನ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಜಿಯೋ 895 ರಿಚಾರ್ಜ್ ಪ್ಲ್ಯಾನ್ :
ಈ ಹೊಸ Jio 895 ರೀಚಾರ್ಜ್ ಯೋಜನೆಯನ್ನು ನೀವು ಆನ್ನೈನ್ನಲ್ಲಿ ಸುಲಭವಾಗಿ ಮಾಡಬಹುದಾಗಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ 12 ಯೋಜನೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಯ ಜೊತೆಗೆ 28 ದಿನಗಳವರೆಗೆ 2GB ಡೇಟಾವನ್ನು ನೀಡಲಾಗುತ್ತದೆ.
ಜಿಯೋ 186 ಪ್ರಿಪೇಯ್ಡ್ ಯೋಜನೆ :
ಜಿಯೋ 186 ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯ ಅವಧಿ 28 ದಿನಗಳವರೆಗೆ ಇದ್ದು, ಬಳಕೆದಾರರಿಗೆ ದಿನಕ್ಕೆ 1GB ಡೇಟಾ ಸೇವೆಯನ್ನು ಒದಗಿಸುತ್ತದೆ. ಹಾಗೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವೂ ಲಭ್ಯ. ಜೊತೆಗೆ ದಿನಕ್ಕೆ 100 SMS ಮಾಡುವ ಅವಕಾಶವಿದೆ. ಇದಿಷ್ಟೇ ಅಲ್ಲದೆ, ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನೆಮಾಕ್ಕೆ ಚಂದಾದಾರಿಕೆಯನ್ನು ಸಹ ನೀಡುತ್ತದೆ.
