Home » Jio Recharge Plan: ಜಿಯೋ ಗ್ರಾಹಕರಿಗೆ ಎರಡೆರಡು ಗುಡ್ ನ್ಯೂಸ್ ಇಲ್ಲಿದೆ: ಹೊಸ ರಿಚಾರ್ಜ್ ಪ್ಲಾನ್ ಜೊತೆಗೆ 5G ಸೇವೆ ಲಭ್ಯ!

Jio Recharge Plan: ಜಿಯೋ ಗ್ರಾಹಕರಿಗೆ ಎರಡೆರಡು ಗುಡ್ ನ್ಯೂಸ್ ಇಲ್ಲಿದೆ: ಹೊಸ ರಿಚಾರ್ಜ್ ಪ್ಲಾನ್ ಜೊತೆಗೆ 5G ಸೇವೆ ಲಭ್ಯ!

4 comments
Jio Recharge Plan

Jio Recharge Plan: ಜಿಯೋ ಟೆಲಿಕಾಂ ಆರಂಭ ಆದಾಗಿನಿಂದ ಜಿಯೋ ಗ್ರಾಹಕರಿಗೆ ಒಂದಲ್ಲ ಒಂದು ಆಫರ್ ಕಂಪನಿ ನೀಡುತ್ತಲೇ ಬಂದಿದೆ. ಇದೀಗ ಮತ್ತೇ ಜಿಯೋ ಕಡಿಮೆ ಮೊತ್ತದ 98 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಜನರಿಗೆ ನೀಡುತ್ತಿದೆ. ಹೌದು, 999 ರೂಪಾಯಿ ಪಾವತಿಸಿ ಜಿಯೋ ಟೆಲಿಕಾಂ 98 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ಲಾನ್ (Jio Recharge Plan) ಒಂದನ್ನು ಪರಿಚಯಿಸಿದೆ. ಈ ಪ್ಲಾನ್ ಇತರ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಗಳಿಗಿಂತ ಉತ್ತಮ ಪ್ರಯೋಜನ ನೀಡುತ್ತದೆ.

ಕೇವಲ 999 ರೂ ಪಾವತಿಸಿ 98 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ನಲ್ಲಿ ಗ್ರಾಹಕರು ಉಚಿತವಾಗಿ ಅನಿಯಮಿತ ಧ್ವನಿ ಕರೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಿದೆ. ಇದರ ಜೊತೆಗೆ ಪ್ರತಿದಿನ 2GB ಡೇಟಾದ ಬಳಕೆಯನ್ನು ಪಡೆಯಲು ಸಾಧ್ಯವಿದೆ. ಹಾಗೂ ಪ್ರತಿದಿನ 100 SMS ಉಚಿತವಾಗಿದೆ. ಒಟ್ಟಾರೆಯಾಗಿ ಈ ಪ್ಲಾನ್ ನಲ್ಲಿ 196GB ಡೇಟಾ ಬಳಸಲು ಸಾಧ್ಯ ಆಗುತ್ತದೆ.

ಅಲ್ಲದೆ ಇನ್ನೊಂದು ಸಂತೋಷದ ಸುದ್ದಿ ಇದೆ. ಹೌದು, Jio ತನ್ನ ಗ್ರಾಹಕರಿಗೆ 5G ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದ ಗ್ರಾಹಕರು ಇನ್ನು ಹೆಚ್ಚಿನ ಸ್ಪೀಡ್ ನಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದು. ಮತ್ತು ಗ್ರಾಹಕರು ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಅನಿಯಮಿತ 5G ಡೇಟಾವನ್ನು ಸಹ ಪಡೆಯಬಹುದು. ಆದರೆ ಈ ಸೇವೆಯನ್ನು ಪಡೆಯಲು ಗ್ರಾಹಕರು 5G ಮೊಬೈಲ್ ಬಳಸುವುದು ಅಗತ್ಯ.

School Admission: ಶಾಲಾ ದಾಖಲಾತಿಗೆ ಗರಿಷ್ಠ ವಯೋಮಿತಿ ಅಧಿಕೃತ ನಿಯಮ ಜಾರಿ: ಇನ್ಮುಂದೆ ಈ ನಿಯಮ ಮೀರಿದ್ರೆ 1ನೇ ತರಗತಿ ಪ್ರವೇಶವಿಲ್ಲ

You may also like

Leave a Comment