Home » ಜೋಡುಪಾಲ | ಹೆದ್ದಾರಿಗೆ ಉರುಳಿದ ಬಂಡೆ ,ವಾಹನ ಸವಾರರೇ ಎಚ್ಚರ

ಜೋಡುಪಾಲ | ಹೆದ್ದಾರಿಗೆ ಉರುಳಿದ ಬಂಡೆ ,ವಾಹನ ಸವಾರರೇ ಎಚ್ಚರ

by Praveen Chennavara
0 comments

ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ತೆರಳುವಾಗ ಸುಮಾರು 15 ಕಿಲೋ ಮೀಟರ್ ದೂರದಲ್ಲಿ ಜೋಡುಪಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಬ್ಬಿ ಕೊಲ್ಲಿ ಜಲಪಾತದ ಪಕ್ಕದಲ್ಲೇ ಹೆದ್ದಾರಿಗೆ ಬಂಡೆ ಕುಸಿದು ಬಿದ್ದಿದೆ.

ಇನ್ನೂ ಬಂಡೆ ಉರುಳುವ ಸಾಧ್ಯತೆ ಇದೆ.ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.

ಮೂರು ವರ್ಷದ ಹಿಂದೆ ಇಲ್ಲಿ ಭಾರಿ ಮಳೆ ಸುರಿದು ಗುಡ್ಡ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಜಾಗದ ವಾಸ್ತವ ಸ್ಥಿತಿ ಬಗ್ಗೆ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಬಳಿಕ ಜೋಡುಪಾಲ ಬಳಿಯ ಇನ್ನೂ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯಬಹುದು ಎನ್ನುವ ಎಚ್ಚರಿಕೆ ನೀಡಿದ್ದರು.

ಆದರೆ ಈ ಬಾರಿ ಮಳೆ ತೀವ್ರ ಪ್ರಮಾಣದಲ್ಲಿ ಬಾರದಿದ್ದರೂ ಗುಡ್ಡ ಕುಸಿದಿದೆ. ಇದು ಅಲ್ಲಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ.

You may also like

Leave a Comment