ದಿನಾಂಕ 22.01.2026 ನೇ ಗುರುವಾರದಂದು ಶ್ರೀ ನಿತ್ಯನೂತನ ಭಜನ ಮಂದಿರ (ರಿ) ಜೋಡುಸ್ಥಾನದಲ್ಲಿ 25 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯು ಪೂಜ್ಯ ಖಾವಂದರ ದಿವ್ಯ ಉಪಸ್ಥಿತಿಯಲ್ಲಿ ಮಧ್ಯಾಹ್ನ 12.45 ಕ್ಕೆ ಸರಿಯಾಗಿ ಜರುಗಲಿರುವುದು.
ನಂತರ ಸಂಜೆ ಸಮಯ 6.30ರಿಂದ ಪೂಜ್ಯ ಶ್ರೀ ಡಿ ಹರ್ಷೆಂದ್ರ ಕುಮಾರ್ ಮತ್ತು ಹರೀಶ್ ಪೂಂಜಾ ಇವರ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮವು ನಡೆಯಲಿದೆ. ರಾತ್ರಿ 8.30 ಕ್ಕೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮವಿದ್ದು 10.30 ರ ನಂತರ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಭಿಮಾನಿಗಳು ಭಾಗವಹಿಸಲು ಕೋರಲಾಗಿದೆ.















