Home » ನಿವೃತ್ತಿ ವೇಳೆ ಜಡ್ಜ್‌ಗಳ ಕ್ಷಿಪ್ರ ತೀರ್ಪು: ಕೊನೇ ಓವರ್‌ಗೆ ಸಿಕ್ಸ‌ರ್ ಥರ ಆಗ್ತಿದೆ- ಸುಪ್ರೀಂ

ನಿವೃತ್ತಿ ವೇಳೆ ಜಡ್ಜ್‌ಗಳ ಕ್ಷಿಪ್ರ ತೀರ್ಪು: ಕೊನೇ ಓವರ್‌ಗೆ ಸಿಕ್ಸ‌ರ್ ಥರ ಆಗ್ತಿದೆ- ಸುಪ್ರೀಂ

0 comments

ಹೊಸದಿಲ್ಲಿ: ಜಡ್ಜ್ ಗಳು ತಮ್ಮ ನಿವೃತ್ತಿಗೆ ಕೆಲ ದಿನಗಳಷ್ಟೇ ಉಳಿದಿರುವಾಗ ಹಲವಾರು ಪ್ರಕರಣ ತ್ವರಿತವಾಗಿ ಇತ್ಯರ್ಥಪಡಿಸುವ ವರ್ತನೆಯನ್ನು ಕ್ರಿಕೆಟ್ ಪಂದ್ಯದ ಕೊನೆ ಓವರ್‌ಗಳಲ್ಲಿ ಸಿಕ್ಸರ್ ಬಾರಿಸುವುದಕ್ಕೆ ಹೋಲಿಸಿ ಸುಪ್ರೀಂ ಕೋರ್ಟ್ ಟೀಕಿಸಿದೆ.

ನವೆಂಬರ್ 30ರಂದು ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು ನಿವೃತ್ತರಾಗಬೇಕಾಗಿತ್ತು. ಆದರೆ ಅವರು ಕೊನೆಯ ದಿನಗಳಲ್ಲಿ ನೀಡಿದ 2 ಆದೇಶಗಳು ಸಂಶಯಾಸ್ಪದವಾಗಿದೆ ಎಂಬ ಕಾರಣವೊಡ್ಡಿ ಅವರ ನಿವೃತ್ತಿಗೆ 11 ದಿನ ಇರುವಂತೆ, ನ.19ರಂದು ಹೈಕೋರ್ಟ್ ಅವರನ್ನು ಅಮಾನತುಗೊಳಿಸಿತ್ತು. ಇದೀಗ ಪ್ರಕರಣವನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ.

ಕೊನೆಯ ಕ್ಷಣಗಳಲ್ಲಿ ಮ್ಯಾರಥಾನ್ ತೀರ್ಪು ನೀಡುವುದನ್ನು ಕ್ರಿಕೆಟ್ ಪಂದ್ಯದ ಕೊನೇ ಓವರ್‌ನಲ್ಲಿ ಸಿಕ್ಸರ್‌ಗಳನ್ನು ಹೊಡೆದಂತೆ ಕೆಲವು ಜಡ್ಜ್‌ಗಳು ನಿವೃತ್ತಿಯ ವೇಳೆ ಬಹಳಷ್ಟು ತೀರ್ಪು ನೀಡುವ ಟ್ರೆಂಡ್ ಶುರುವಾಗಿದೆ. ಇದು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟು ಟೀಕಿಸಿದೆ.

You may also like