7
Bhavani Revanna: ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಕುರಿತಂತೆ ಮಾಜಿ ಶಾಸಕ ಹೆಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಕೋರ್ಟ್ ಶಾಕಿಂಗ್ ನ್ಯೂಸೊಂದನ್ನು ನೀಡಿದೆ.
42ನೇ ಎಸಿಎಂಎಂ ನ್ಯಾಯಾಲಯವು ಭವಾನಿ ರೇವಣ್ಣ ಹಾಗೂ ಕೆ.ಆರ್. ರಾಜಗೋಪಾಲ್ ಅವರು ಪ್ರಕರಣದಿಂದ ಕೈ ಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಈ ಪ್ರಕರಣದಲ್ಲಿ ಕೆ.ಎ.ರಾಜಗೋಪಾಲ್ ಎ7 ಆರೋಪಿಯಾಗಿದ್ದು, ಭವಾನಿ ರೇವಣ್ಣ ಎ8 ಆರೋಪಿಯಾಗಿದ್ದಾರೆ.
ಭವಾನಿ ರೇವಣ್ಣ ತಮ್ಮನ್ನು ಈ ಪ್ರಕರಣದಿಂದ ಕೈ ಬಿಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ಭವಾನಿ ರೇವಣ್ಣ, ರಾಜಗೋಪಾಲ್ ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ.
