Kabja Sharan: ಹೊಸ ವರ್ಷದ ದಿನ ಯುವತಿಯನ್ನು ಅಪಹರಣ ಮಾಡಿದ ಆರೋಪ ದಡಿ ಯೂಟ್ಯೂಬರ್ಸ್ ಕಬ್ಜ ಶರಣ್ ಹಾಗೂ ಮಂಡ್ಯ ಕೆಂಪಣ್ಣಗೆ ಮಾಗಡಿಯಲ್ಲಿ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಕಬ್ಜ ಶರಣ್ ಅವರು ತಮ್ಮ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ.
ಹೌದು, ಹೊಸ ವರ್ಷದ ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಯೌಟ್ಯೂಬರ್ಸ್ ಗಳಾದ ಕಬ್ಜ ಶರಣ್ ಮತ್ತು ಮಂಡ್ಯ ಕೆಂಪಣ್ಣ ಅವರಿಗೆ ಮಾಗಡಿಯಲ್ಲಿ ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ಹೊಡೆದಾಟದ ವಿಡಿಯೋದಲ್ಲಿ ಇವರಿಬ್ಬರಿಗೆ ಯಾಕೆ ಗೂಸ ಬೀಳುತ್ತಿದೆ ಎಂಬುದಾಗಿ ಎಲ್ಲಿಯೂ ಸ್ಪಷ್ಟೀಕರಣ ಸಿಗುವುದಿಲ್ಲ. ನೋಡುಗರಿಗಂತೂ ಇದು ಗೊಂದಲಮಯವಾದ ವಾತಾವರಣವನ್ನು ಸೃಷ್ಟಿಸುತ್ತದೆ. ವಿಡಿಯೋದಲ್ಲಿ ಅವರಿಬ್ಬರೂ ಎಷ್ಟು ಬೇಡಿಕೊಂಡರೂ ಕೂಡ ಸ್ಥಳೀಯರು ದಯೆ ತೋರದೆ ಹೊಡೆಯುವುದನ್ನು ಕಾಣಬಹುದು. ಆದರೆ ಹೊಸ ವರ್ಷದ ಆಚರಣೆಯ ನೆಪದಲ್ಲಿ ಈ ಯೂಟ್ಯೂಬರ್ಸ್ ಗಳು ಮಾಗಡಿಯ ಯುವತಿಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆದರೆ ಇದರ ಹಿಂದೆ ಬೇರೆ ಅಸಲಿ ವಿಚಾರವಿದೆ ಎಂದು ಶರಣ ಹಾಗೂ ಕೆಂಪಣ್ಣ ವಿಡಿಯೋ ಮಾಡಿ ತಿಳಿಸಿದ್ದರು. ಈ ಬೆನ್ನಲ್ಲೇ ಕಬ್ಜ ಶರಣ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗೆ ಗುಡ್ ಬೈ ಹೇಳಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಮತ್ತೊಂದೆಡೆ ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ 200ಕೆ ಫಾಲೋವರ್ಸ್ ಅನ್ನು ಹೊಂದಿದ್ದ ಕಬ್ಜಾ ಶರಣ್ (ಶರಣಬಸಪ್ಪ) ತಾನು ತಪ್ಪೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ, ನನ್ನನ್ನು ಇಷ್ಟು ದಿನ ಬೆಂಬಲಿಸಿದ ಎಲ್ಲ ಫಾಲೋವರ್ಸ್‌ಗಳಿಗೆ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಕ್ಷಮೆ ಕೇಳುತ್ತಾ ಧನ್ಯವಾದ ಅರ್ಪಿಸಿದ್ದಾನೆ. ನಂತರ, ಇದೇ ನನ್ನ ಕೊನೆಯ ವೀಡಿಯೋ, ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಸ್ಥಗಿತ ಮಾಡುತ್ತೇನೆ ಎಂದು ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿ ವಿಡಿಯೋ ಹಂಚಿಕೊಂಡಿದ್ದಾನೆ.
https://www.instagram.com/reel/DTAJElPEx3K/?igsh=MWdkZDBvOGh6eDZrMw==
