Home » ಕಡಬ ತಾಲೂಕು ಭಜನಾ ಪರಿಷತ್ ಸಭೆ

ಕಡಬ ತಾಲೂಕು ಭಜನಾ ಪರಿಷತ್ ಸಭೆ

by Praveen Chennavara
0 comments

ಕಡಬ : ಕಡಬ ತಾಲೂಕು ಭಜನಾ ಪರಿಷತ್ತಿನ ಸಭೆಯನ್ನು ಮರ್ಧಾಳದ ಅಂಬೇಡ್ಕರ್ ಸಭಾಭವನದಲ್ಲಿ ನಡೆಸಲಾಯಿತು.

ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಪರಿಷತ್ ಕಾರ್ಯದರ್ಶಿ ಸದಾನಂದ ಕಾಣಿಯೂರು, ಉಪಾಧ್ಯಕ್ಷರಾದ ಮಾಧವ ಕುಂಬಾರ ದೊಡ್ಡ ಕೊಪ್ಪ, ಶ್ರೀಮತಿ ನಂದಾ ಇಚಿಲಂಪಾಡಿ, ಕೃಷ್ಣಪ್ಪ ಕೊಣಾಜೆ, ನಾಗಪ್ಪ ಗೌಡ ಕುಂತೂರು, ಜೊತೆ ಕಾರ್ಯದರ್ಶಿ ಪ್ರಶಾಂತ್ ಪುತ್ತಿಗೆ, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಎನ್ ಉಪಸ್ಥಿತರಿದ್ದರು.

ತಾಲ್ಲೂಕಿನ ಭಜನಾ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನ ಕಮ್ಮಟದಲ್ಲಿ ತರಬೇತಿಗಾಗಿ ಒಟ್ಟು 12 ಭಜನಾ ಮಂಡಳಿಗಳನ್ನು ಆಯ್ಕೆ ಮಾಡಲಾಯಿತು.

ಪ್ರತಿ ವಲಯ ಮಟ್ಟದಲ್ಲಿ ಭಜನಾ ತರಬೇತಿ ನಡೆಸುವ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಕಡಬ ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು ಮತ್ತು ಬಿಳಿನೆಲೆ ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

You may also like

Leave a Comment