Kadaba : ಹಿಂದೂ ಹುಡುಗಿ ಮತ್ತು ಇಬ್ಬರು ಮುಸ್ಲಿಂ ಹುಡುಗರು ಬಸ್ಸಿನ ಒಂದೇ ಸೀಟಿನಲ್ಲಿ ಕುಳಿತಿದ್ದು ನಿಖರ ಮಾಹಿತಿ ಮೇರೆಗೆ ಕಡಬ ಭಜರಂಗ ದಳದ ಕಾರ್ಯಕರ್ತರು ಬಸ್ಸ್ ತಡೆದು ನಿಲ್ಲಿಸಿದ್ದಾರೆ ಎಂಬ ಸಂದೇಶ ಕಡಬದ ಕೆಲ ವಾಟ್ಸಪ್ ಗ್ರೂಪಿನಲ್ಲಿ ಭಾರಿ ವೈರಲ್ ಆಗಿದೆ.
ಕಡಬದ ಭಜರಂಗದಳದ ಕಾರ್ಯಕರ್ತರು ಏ. 30ಸಂಜೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ KSRTC ಬಸ್ ಅನ್ನು ಕಡಬ ದುರ್ಗಾಂಬಿಕ ದೇವಾಲಯದ ಬಳಿ ತಡೆದು ನಿಲ್ಲಿಸಿದ್ದರು.ಇನ್ನು ವಿಷ್ಯ ತಿಳಿಯುತ್ತಿದ್ದಂತೆ ನೂರಾರು ಹಿಂದೂ ಕಾರ್ಯಕರ್ತರು ರೋಡ್ ನಲ್ಲಿ ಹೋಗುವರು ಸ್ಥಳಕ್ಕೆ ಧಾವಿಸಿದ್ದರು.
ಆದ್ರೆ ನಿಜ ವಿಚಾರ ಬೇರೆಯೇ ಇತ್ತು. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೆಲ್ಸ ಮಾಡ್ತಾ ಇದ್ದ ಒಬ್ಬರ ಮದ್ವೆ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇತ್ತಂತೆ ಅದಕ್ಕೆ ಅಲ್ಲಿನ ಸರ್ಜನ್’ ಗಳು ಡ್ಯೂಟಿ ಡಾಕ್ಟರ್’ಗಳು,ನರ್ಸ್’ಗಳು,ಹೌಸ್ ಕೀಪಿಂಗ್ ಸ್ಟಾಫ್ ಗಳು ಸೇರಿ ಮದುವೆ ಆದವರ ಜೊತೆ ಕ್ಲೋಸ್ ಇದ್ದ ಸಹದ್ಯೋಗಿಗಳು ಬಂದಿದ್ದು ಒಂದಷ್ಟು ಜನ ಸ್ವಂತ ವಾಹನದಲ್ಲಿ ಹೋಗಿದ್ದು, ಒಂದಷ್ಟು ಜನ ಬಸ್ ನಲ್ಲಿ ಹೋಗಿದ್ದಾರೆ. ಆದ್ರೆ ಇಲ್ಲಿಬ್ಬರು ಸೀಟು ಸಿಗದೆಯೋ ಗೊತ್ತಿಲ್ಲ ಅಕ್ಕ ಪಕ್ಕ ಕೂತಿದ್ದಾರೆ ಅಷ್ಟೇ ಆದ್ರೆ ಯಾವನೋ ಒಬ್ಬ ಇಲ್ಲಿ ಸುಳ್ಳು ಮಾಹಿತಿ ನೀಡಿ ಕೋಮು ಸೌಹಾರ್ದತೆ ಕೆಡಿಸಲು ಹಾಗು ಕಾನೂನು ಸುವ್ಯವಸ್ಥೆ ಹಾಳು ಮಾಡಲು ನೋಡಿದ್ದು ವಾಸ್ತವ ವಿಚಾರ ತಿಳಿದ ಬಳಿಕ ಎಲ್ಲರೂ ತೆರಳಿದ್ದಾರೆ.
