Home » ಕಡಬ : ಸುಲಭವಾಗಿ ಮಹಿಳೆಯರಿಗೆ ಸಾಲ ಸೌಲಭ್ಯ | ಮೊದಲು ಇನ್ಸೂರೆನ್ಸ್ ಹಣ ಪಾವತಿಸಿ! ನಂತರ ಸಾಲ ಸಿಗುತ್ತದೆ ಎಂದು ನಂಬಿ ಹಣ ಪಾವತಿಸಿ ಮೋಸ ಹೋದರು

ಕಡಬ : ಸುಲಭವಾಗಿ ಮಹಿಳೆಯರಿಗೆ ಸಾಲ ಸೌಲಭ್ಯ | ಮೊದಲು ಇನ್ಸೂರೆನ್ಸ್ ಹಣ ಪಾವತಿಸಿ! ನಂತರ ಸಾಲ ಸಿಗುತ್ತದೆ ಎಂದು ನಂಬಿ ಹಣ ಪಾವತಿಸಿ ಮೋಸ ಹೋದರು

by Praveen Chennavara
0 comments

ಕಡಬ: ನಮ್ಮ ಸಂಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು, ಇದುವರೆಗೆ ಉಡುಪಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಂಸ್ಥೆ ಇದೀಗ ನಿಮ್ಮ ಊರಿಗೆ, ರೂ. 50 ಸಾವಿರಕ್ಕೆ ತಿಂಗಳ ಕಂತು ರೂ. 1900 ಅವಧಿ 30 ತಿಂಗಳು, ರೂ.1 ಲಕ್ಷ ಸಾಲಕ್ಕೆ ತಿಂಗಳ ಕಂತು ರೂ.3800 ಅವಧಿ 30 ತಿಂಗಳು, ನೋಂದಾಯಿಸಿ, ಎಲ್ಲಾ ಮಹಿಳೆಯರಿಗೂ ಸಾಲ ನೀಡಲಾಗುತ್ತದೆ, ಗ್ರೂಪ್ ಲೀಡರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುವುದು, ಮುಖ್ಯ ಕಛೇರಿ ಜೆ.ಪಿ.ನಗರ ಆರ್. ಕೆ. ಕಾಂಪ್ಲೆಕ್ಸ್ ಬೆಂಗಳೂರು. ಅಬ್ಬಾಬ್ಬ ಎಂತಹ ಶ್ಲೋಗನ್, ಎಲ್ಲರೂ ನಂಬಲೇಬೇಕು, ಇಂತಹ ನೋಟಿಸುಗಳನ್ನು ಹಂಚಿಕೊಂಡು ಕೆಲ ವ್ಯಕ್ತಿಗಳು ಕಡಬ ಪರಿಸರದ ಹಲವೆಡೆ ಸಂಚರಿಸಿ 6 ಜನರ ಗ್ರೂಪ್‌ಗಳನ್ನು ಮಾಡುವಂತೆ ನಿಮಗೆ ಸಾಲ ನೀಡಲಾಗುತ್ತದೆ ಎಂದೆಲ್ಲ ಪ್ರಚಾರ ನಡೆಸಿದ್ದರು.

ಇಷ್ಟ ಆದರೆ ಚಿಂತೆ ಇಲ್ಲ, ಆದರೆ ಸಾಲ ನೀಡುವ ಮೊದಲು ಅವರಿಗೆ 980 ರೂಪಾಯಿ ಎಮ ಕಟ್ಟಬೇಕಂತೆ, ಆಯಿತು 50 ಸಾವಿರ, 1 ಲಕ್ಷ ಸಾಲ ಕೊಡುತ್ತಾರೆ ಅಂತೆ 980 ಕಟ್ಟುವುದು ಏನು ಮಹಾ ಅ೦ತ ಇಲ್ಲಿನ ಹಲವಾರು ಮಹಿಳೆಯರು ಗ್ರೂಫ್ ಲೀಡರ್ ಮೂಲಕ ಹಣ ಒಟ್ಟು ಸೇರಿಸಿ ಅವರು ನೀಡಿದ ಫೆಡರಲ್, ಕೆಲವು ಕಡೆ ಮುತ್ತೂಟ್ ಫೈನಾನ್ಸ್‌ಗಳ ಅಕೌಂಟ್‌ಗಳಿಗೆ ಟ್ರಾನ್ಸರ್ ಮಾಡಿದ್ದಾರೆ. ಇವತ್ತು ಹಣ ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯುತ್ತಾ ಕುಳಿತಿರುವ ಮಂದಿಗೆ ಈಗೊಂದು ಶಾಕ್ ಆಗಿದೆ ಏನೆಂದರೆ ಹಣ ನೀಡುತ್ತೇವೆ ಎಂದವರ ಮೊಬೈಲ್ ನಂಬರೇ ಕಾರ್ಯನಿರ್ವಹಿಸುತ್ತಿಲ್ಲ! ಹಣ ಕಳೆದುಕೊಂಡ ಮಂದಿ ಪೇಚಿಗೆ ಸಿಲುಕಿದ್ದಾರೆ.

ಸಾಲ ನೀಡುವುದಾಗಿ ಕಾಲನಿ ಮಹಿಳೆಯರಿಂದ 970 ರೂ, 750 ರೂ ಸಂಗ್ರಹಿಸಿ ಆಧಾರ್‌ ಕಾರ್ಡ್, ರೇಷನ್ ಕಾರ್ಡ್ ಪ್ರತಿಯನ್ನೂ ಪಡೆದು ಹಲವರನ್ನು ಮರುಳು ಮಾಡಿ ಲಕ್ಷಾಂತರ ಹಣ ಲಪಟಾಯಿಸಿದ ಘಟನೆ ಕಡಬ ಪರಿಸರದಲ್ಲಿ ನಡೆದಿದೆ.

ತಿಂಗಳ ಹಿಂದೆ ಕಡಬ, ಕೋಡಿಂಬಾಳ, ಮರ್ದಾಳ, ಕರ್ಮಾಯಿ ಸೇರಿದಂತೆ ಕೆಲ ಕಾಲನಿಗಳಿಗೆ ಶಬರಿ ಫೈನಾನ್ಸ್ ಹೆಸರು ಹೇಳಿಕೊಂಡು ಕೇರಳ ಅಥವಾ ತಮಿಳುನಾಡು ಮೂಲದವರೆನ್ನಲಾದ ವ್ಯಕ್ತಿಗಳು ಕೆಲ ಮನೆಗಳಿಗೆ ಬಂದು ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಬರಲಾರಂಬಿಸಿದೆ. ಈ ಬಗ್ಗೆ ಠಾಣೆಗೆ ದೂರು ನೀಡಿದರೆ ಈ ರೀತಿ ಹಣ ಸಂಗ್ರಹ ಮಾಡಿ ಮೋಸ ಮಾಡುವವರ ಜಾಲವನ್ನು ಪತ್ತೆ ಹಚ್ಚಬಹುದು ಆದರೆ ದೂರು ನೀಡಲು ಯಾರೂ ಮುಂದೆ ಬಾರದೆ ಇರುವುದು ಇಂತಹ ಕುಕೃತ್ಯಗಳು ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

You may also like

Leave a Comment