Home » ಕಡಬ: ಮರ್ದಾಳ ನೆಕ್ಕಿತ್ತಡ್ಕ ದರ್ಗಾ ದಲ್ಲಿ ಕಳ್ಳರ ಕೈಚಳಕ!! ಬೀಗ ಮುರಿದು ಮೂವತ್ತು ಸಾವಿರಕ್ಕೂ ಹೆಚ್ಚಿನ ಹಣ ದೋಚಿದ ಕಳ್ಳರು

ಕಡಬ: ಮರ್ದಾಳ ನೆಕ್ಕಿತ್ತಡ್ಕ ದರ್ಗಾ ದಲ್ಲಿ ಕಳ್ಳರ ಕೈಚಳಕ!! ಬೀಗ ಮುರಿದು ಮೂವತ್ತು ಸಾವಿರಕ್ಕೂ ಹೆಚ್ಚಿನ ಹಣ ದೋಚಿದ ಕಳ್ಳರು

0 comments

ಕಡಬ: ತಾಲೂಕಿನ ಮರ್ದಾಳ ನೆಕ್ಕಿತ್ತಡ್ಕ ದರ್ಗಾದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು , ದರ್ಗಾದ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚಿನ ನಗದು ಕದ್ದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಸುಮಾರು ಮೂರು ಗಂಟೆಯ ಹೊತ್ತಿಗೆ ಬೈಕಿನಲ್ಲಿ ಬಂದಿದ್ದ ಇಬ್ಬರು ಕೃತ್ಯ ಎಸಗಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದ್ದು, ದರ್ಗಾದ ಕಬ್ಬಿಣದ ಬಾಗಿಲಿನ ಎರಡು ಬೀಗಗಳ ಪೈಕಿ ಒಂದನ್ನು ಒಡೆದಿದ್ದು, ಇನ್ನೊಂದನ್ನು ಒಡೆಯಲಾಗದ ಕಾರಣ ಚಿಳಕವನ್ನೇ ಮುರಿದು ಕಳ್ಳತನ ನಡೆಸಿದ್ದಾರೆ.

ಒಟ್ಟು ಮೂವತ್ತು ಸಾವಿರಕ್ಕೂ ಮಿಕ್ಕಿ ನಗದನ್ನು ಕಳ್ಳರು ದೋಚಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment