Home » ಕಡಬ:ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭ ತೆಗೆಸಿದ ಪ್ರಕರಣ!! | ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿದ ಯುವತಿಯ ತಂದೆ

ಕಡಬ:ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭ ತೆಗೆಸಿದ ಪ್ರಕರಣ!! | ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿದ ಯುವತಿಯ ತಂದೆ

0 comments

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆ ಬಳಿಕ 35 ಸಾವಿರ ಹಣ ಕೊಟ್ಟು ಯುವತಿಯ ಗರ್ಭ ತೆಗೆಸಿದ ಪ್ರಕರಣದ ಆರೋಪ ಹೊತ್ತಿರುವ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್ ನಾಯಕ್ ವಿರುದ್ಧ ಇಂದು ನೊಂದ ಯುವತಿಯ ತಂದೆ ದೂರನ್ನು ದಾಖಲಿಸಿದ್ದಾರೆ.

ಘಟನೆ ವಿವರ:ಆರೋಪಿ ಪೊಲೀಸಪ್ಪನು ಕೆಲ ತಿಂಗಳ ಹಿಂದೆ ಯುವತಿಯ ಮನೆಗೆ ಯಾವೊದೋ ಕೇಸ್ ವಿಚಾರದಲ್ಲಿ ಪದೇ ಪದೇ ತೆರಳಿದ್ದು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.ಆ ಬಳಿಕ ಯುವತಿಯು ಗರ್ಭವತಿಯಾಗಿದ್ದು, ಪೊಲೀಸಪ್ಪನು ತನ್ನ ಖಾತೆಯಿಂದ ಸುಮಾರು 35 ಸಾವಿರ ಹಣ ವರ್ಗಾಯಿಸಿ ಆಕೆಯ ಅಬೋರ್ಷನ್ ಮಾಡಿಸಿದ್ದ ಎನ್ನಲಾಗಿದೆ.

ಈ ಸುದ್ದಿ ಮಧ್ಯಮಗಳಲ್ಲಿ ಬಿತ್ತರವಾದ ಬೆನ್ನಲ್ಲೇ ಕಡಬ ಪೊಲೀಸ್ ಠಾಣೆಗೆ ಪುತ್ತೂರು ಡಿವೈಎಸ್ಪಿ ಗಾನಕುಮಾರಿ ಭೇಟಿ ನೀಡಿ, ದೂರು ದಾಖಲಿಸಿದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದರು.ಸದ್ಯ ನೊಂದ ಯುವತಿಯ ತಂದೆ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಯಾವ ಹಂತ ತಲುಪಲಿದೆ ಎಂಬುವುದನ್ನು ಕಾದುನೋಡಬೇಕಾಗಿದೆ.

You may also like

Leave a Comment