1
ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ತೋಡೊಂದರಲ್ಲಿ ಕೊಳೆತ ತಲೆಬುರುಡೆಯೊಂದು ತೇಲಿಬಂದಿದ್ದ ಘಟನೆ ಕಡಬ ತಾಲೂಕಿನ ಪೆರಾಬೆ ಗ್ರಾಮದ ಅನ್ನಡ್ಕ ಎಂಬಲ್ಲಿ ನಡೆದಿದೆ.
ಅನ್ನಡ್ಕದಲ್ಲಿರುವ ತೋಡಿನಲ್ಲಿ ಕಂಡ ಕೊಳೆತ ತಲೆ ಬುರುಡೆ,ಕಾಡಿನಿಂದ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
