2
Kadaba: ಬಿಳಿನೆಲೆ ಗ್ರಾಮದ ಚೆಂಡೆಹಿತ್ತು ನಿವಾಸಿ ದಿ.ಮೇದಪ್ಪ ಗೌಡರ ಪುತ್ರ, ರಿಕ್ಷಾ ಚಾಲಕ ಚೇತನ್(35ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.17ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚೇತನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೆಲ ದಿನಗಳ ಹಿಂದೆ ಕಡಬದ ಆಸ್ಪತ್ರೆಯೊಂದರಲ್ಲಿ ತಪಾಸಣೆ ವೇಳೆ ಜಾಂಡೀಸ್ ಇರುವುದು ಪತ್ತೆಯಾಗಿದೆ. ನಂತರ ಅವರು ಅವರು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
