Home » ಕಡಬ : ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಮನವಿ

ಕಡಬ : ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಮನವಿ

by Praveen Chennavara
0 comments

ಕಡಬ : ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಈಗಾಗಲೇ ಸರಕಾರಿ ಕಛೇರಿಗಳು ಅನುಷ್ಠಾನವಾಗುತಿದ್ದು ಶೀಘ್ರವಾಗಿ ನ್ಯಾಯಾಲಯ ಸ್ಥಾಪನೆಯಾಗಬೇಕು ಎಂದು ಕಡಬದ ವಕೀಲರ ನಿಯೋಗವೊಂದು ದ.ಕ ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದೆ.

ಕಡಬ ತಾಲೂಕು ಕೇಂದ್ರವಾಗಿ ಎರಡು ವರ್ಷ ಕಳೆದಿದೆ, ಇಷ್ಟಾದರೂ ಇಲ್ಲಿನ ಜನ ಪುತ್ತೂರು ಅಥವಾ ಸುಳ್ಯ ನ್ಯಾಯಾಲಯವನ್ನು ಆಶ್ರಯಿಸಬೇಕಾಗಿದೆ.

ಕಡಬ ತಾಲೂಕಿನ ಜನತೆಯ ಅನುಕೂಲಕ್ಕಾಗಿ ಕಡಬದಲ್ಲಿ ಶೀಘ್ರ ನ್ಯಾಯಾಲಯ ಸ್ಥಾಪನೆಯಾಗಬೇಕಿದೆ, ಸುಳ್ಯ ಹಾಗೂ ಪುತ್ತೂರಿನಲ್ಲಿ ನಡೆಯುವ ವ್ಯಾಜ್ಯಗಳ ಪೈಕಿ ಶೇ 50 ರಷ್ಟು ವ್ಯಾಜ್ಯಗಳು ಕಡಬದ್ದೇ ಇರುವುದರಿಂದ ನ್ಯಾಯಾಲಯ ಸ್ಥಾಪನೆಯ ಅಗತ್ಯತೆಯನ್ನು ಜಿಲ್ಲಾ ಮುಖ್ಯ ನ್ಯಾಯಾಧೀಶ ಮುರಳೀಧರ ಪೈ ಅವರಿಗೆ ಮನವರಿಕೆ ಮಾಡಲಾಯಿತು. ಇದಕ್ಕೆ ಮುಖ್ಯ ನ್ಯಾಯಾಧೀಶರು ಸಕಾರಾತ್ಮಕವಾಗಿ ಸ್ಪಂದಿಸಿ ಸ್ಥಳ ಗುರುತಿಸುವಂತೆ ಸೂಚನೆ ನೀಡಿದರು.

ಕಡಬದ ವಕೀಲ ಶಿವಪ್ರಸಾದ್ ಪುತ್ತಿಲ ಅವರ ನೇತೃತ್ವದ ನಿಯೊಗದಲ್ಲಿ ಮಂಗಳೂರಿನ ಬಾರ್ ಅಸೊಶಿಯೇಶನ್‌ನ ಅಧಕ್ಷ ಎನ್.ನರಸಿಂಹ ಹೆಗ್ಡೆ, ಕಡಬದ ವಕೀಲರಾದ ಕೃಷ್ಣಪ್ಪ ಗೌಡ ಕಕ್ವೆ, ಲೋಕೇಶ್ ಎಂ.ಜೆ ಕೊಣಾಜೆ, ಅವಿನಾಶ್ ಬೈತಡ್ಕ, ಅಶ್ವಿತ್ ಖಂಡಿಗ , ನ್ಯಾಯವಾದಿ ಭುವನೇಶ್ವರ ಇಡಾಳ ಮತ್ತಿತರರು ಉಪಸ್ಥಿತರಿದ್ದರು.

You may also like

Leave a Comment