Home » Kadaba: ಚಲಿಸುತ್ತಿದ್ದ ಕಾರಿಗೆ ಬಿದ್ದ ಮರ

Kadaba: ಚಲಿಸುತ್ತಿದ್ದ ಕಾರಿಗೆ ಬಿದ್ದ ಮರ

0 comments

Kadaba: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ನೂಜಿಬಾಳ್ತಿಲ ಸಮೀಪದ ಕನ್ವಾರೆ ಎಂಬಲ್ಲಿ ನಡೆದಿದೆ. ಮೇ 25 ರಂದು ಈ ಘಟನೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಇಚ್ಚಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಕಾರಿನಲ್ಲಿ ಇಬ್ಬರು ಮಹಿಳೆಯರು, ಚಾಲಕ, ಒಂದು ಮಗು ಸಿಲುಕಿಕೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಹೊರ ತೆಗೆದು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿರುವ ಘಟನೆ ನಡೆದಿದೆ.

ಗಾಯಾಳುಗಳಿಗೆ ಮೈ ಕೈಗೆ ತೀವ್ರ ತರಹದ ರಕ್ತ ಗಾಯವಾಗಿದೆ ಎನ್ನಲಾಗಿದೆ. ಈ ಘಟನೆ ಹಿನ್ನೆಲೆ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.

You may also like