3
Suicide: ಪತ್ನಿಯ (Wife) ಕಿರುಕುಳಕ್ಕೆ ಮನ ನೊಂದು ಪತಿ (Husband) ನೇಣಿಗೆ ಶರಣಾದ ಘಟನೆ ಕಲಬುರಗಿಯ (Kalaburagi) ಮಹಾದೇವ ನಗರದಲ್ಲಿ ನಡೆದಿದೆ.
ಆಳಂದದ ರಾಕೇಶ್ (30) ಎಂದು ಕಳೆದ 4 ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಕೇಶ್ ಮದುವೆಯಾಗಿತ್ತು. ಮದುವೆ ಬಳಿಕ ಮನೆ ಕೆಲಸ ಸೇರಿ ಇತರೆ ವಿಷಯಗಳಿಗೆ ರಾಕೇಶ್‌ಗೆ ಪತ್ನಿ ನಿತ್ಯ ಕಿರುಕುಳ ಕೊಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ನನ್ನ ಮಾತು ಕೇಳದೇ ಇದ್ದರೆ ಪೊಲೀಸರಿಗೆ ದೂರು ಕೊಡುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಳು. ಇದೇ ಕಾರಣಕ್ಕೆ ಕಿರುಕುಳ ತಾಳಲಾರದೇ ನೇಣು ಬಿಗಿದು ರಾಕೇಶ್ ಆತ್ಮಹತ್ಯೆಗೆ (suicide ) ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮೃತನ ಪತ್ನಿ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ರಾಕೇಶ್ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
