Mangalore: ಮಂಗಳೂರು; ಪ್ರಚೋದನಕಾರೀ ಭಾಷಣ ವಿಚಾರಕ್ಕೆ ಸಂಬಂಧಪಟ್ಟಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪೋಲಿಸ್ ಇಲಾಖೆ ಎಫೇರ್ ದಾಖಲಿಸಿಕೊಂಡು ಮುಂದಿನ ಕಾರ್ಯಾಚರಣೆಗೆ ರಹಸ್ಯವಾಗಿ ಸಿದ್ಧತೆ ನಡೆಸುತ್ತಿದ್ದಂತೆ ಇತ್ತ ಆರ್ ಎಸ್ ಎಸ್ ಸಂಘಟನೆ ಈ ಬಗ್ಗೆ ಹೈಕೋರ್ಟಿಗೆ ಅಪಿಲು ಸಲ್ಲಿಸಿದ ಹಿನ್ನೆಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಹೈಕೋರ್ಟ್ ನಿಂದ ಇದೀಗ ಬಿಗ್ ರಿಲೀಫ್ ದೊರೆತಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಮೊನ್ನೆ ಬಜ್ಪೆಯಲ್ಲಿ ನಡೆದ ಬಜಪೆ ಚಲೋ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದ ಮೇರೆಗೆ ಎಫೈರ್ ದಾಖಲಾಗಿ ಬಂಧನದ ಕ್ಷಣಗಣನೆಯಲ್ಲಿದ್ದ ಶ್ರೀಕಾಂತ್ ಶೆಟ್ಟಿಗೂ ಕೂಡ ಹೈಕೋರ್ಟ್ ನಿಂದ ಬಿಗ್ ರಿಲೀಫ್ ದೊರಕಿದೆ ಎಂದು ತಿಳಿದು ಬಂದಿದೆ.
ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ವಾಗ್ಮಿಶ್ರೀಕಾಂತ್ ಶೆಟ್ಟಿ ಪರವಾಗಿ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶಾಮ್ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿ ಯವರ ಮೇಲೆ ಹಾಕಿರುವ ಕೇಸುಗಳ ಕುರಿತಾಗಿ ಪ್ರಬಲವಾದ ಮಂಡಿಸಿದ ಹಿನ್ನೆಲೆಯಲ್ಲಿ ಅವರ ವಾದವನ್ನು ಆಲಿಸಿದ ನ್ಯಾಯವಾದಿ ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಇಬ್ಬರ ಪ್ರಕರಣಕ್ಕೂ ಸಂಬಂಧಪಟ್ಟು ಮುಂದಿನ ವಿಚಾರಣೆ ನಡೆಯುವವರೆಗೆ ಪೊಲೀಸ್ ಇಲಾಖೆ ಇವರಿಬ್ಬರ ವಿರುದ್ಧ ಬಂಧನ ಸೇರಿದಂತೆ ಇತರ ಯಾವುದೇ ಒತ್ತಡ ಹಾಗೂ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಆದೇಶಿಸಿ ಜೂನ್ 10ರ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ ಎಂದು ತಿಳಿದುಬಂದಿದೆ.
