Home » PM Modi : ಕನ್ನಡದ ಕುರಿತು ಕಮಲ್ ಹಾಸನ್ ವಿವಾದ ವಿಚಾರ – ಪ್ರಧಾನಿ ಮೋದಿ ವಿಡಿಯೋ ಫುಲ್ ವೈರಲ್

PM Modi : ಕನ್ನಡದ ಕುರಿತು ಕಮಲ್ ಹಾಸನ್ ವಿವಾದ ವಿಚಾರ – ಪ್ರಧಾನಿ ಮೋದಿ ವಿಡಿಯೋ ಫುಲ್ ವೈರಲ್

0 comments

PM Modi: ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಬಂದಿದಾಗ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದಾದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಈ ಬೆನ್ನಲ್ಲೇ ಮತ್ತೆ ರಾಜ್ಯಾದ್ಯಂತ ಕಮಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ಅವರ ಚಿತ್ರಗಳನ್ನು ಬ್ಯಾನ್ ಮಾಡಲಾಗಿದೆ. ಇದರ ಬೆನ್ನಲೇ ಪ್ರಧಾನಿ ನರೇಂದ್ರ ಮೋದಿಯವರ ಆಡಿಯೋ ಒಂದು ವೈರಲ್ ಆಗುತ್ತಿದೆ.

ಹೌದು, ತಮಿಳು ನಟ ಕಮಲ್ ಹಾಸನ್ ವಿವಾದದ ಕಿಡಿ ಹಚ್ಚುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯ ಹಳೇ ವಿಡಿಯೋವನ್ನು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮೋದಿ ತಮಿಳು ಭಾಷೆಯ ಬಗ್ಗೆ ಹೇಳಿದ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಪಿಎಂ ಮೋದಿ ವಿಡಿಯೋ ಕೂಡ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

You may also like