Home » Kamal Haasan: ಥಗ್ ಲೈಫ್ ಬೆನ್ನಲ್ಲೇ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಮಲ್ ಹಾಸನ್

Kamal Haasan: ಥಗ್ ಲೈಫ್ ಬೆನ್ನಲ್ಲೇ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಮಲ್ ಹಾಸನ್

0 comments

Kamal haasan: ಥಗ್ ಲೈಫ್ ಸಿನಿಮಾದ ವಿಷಯದ ವಿಷಯವಾಗಿ ಸೋತು ಸುಣ್ಣವಾಗಿರುವ ಕಮಲ್ ಹಾಸನ್ ಇದೀಗ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.

ಕಮಲ್ ಹಾಸನ್ ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳಿಗೆ ಇದೇ ಜೂನ್ 19ರಂದು ಚುನಾವಣೆ ನಡೆಯಲಿದ್ದು ಕಮಲ್ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಡಿಎಂ ಕೆ ಪಕ್ಷವು ತನ್ನಲ್ಲಿರುವ 4 ರಾಜ್ಯಸಭೆ ಸ್ಥಾನಗಳಲ್ಲಿ ಒಂದನ್ನು ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷಕ್ಕೆ ನೀಡಲು ನಿರ್ಧರಿಸಿದೆ.

ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ಜುಲೈ 24, 2025 ರಂದು ನಿವೃತ್ತಿ ಹೊಂದಲಿದ್ದು, ಡಿಎಂಕೆ ಸುಲಭವಾಗಿ 4 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇನ್ನೂ ಪ್ರಮುಖ ವಿರೋಧ ಪಕ್ಷಗಳಾದಂತಹ ಎಐಎಡಿಎಂಕೆ ಬಿಜೆಪಿ ಸೇರಿದಂತೆ ಇತರ ಮಿತ್ರಪಕ್ಷಗಳ ಬೆಂಬಲದೊಂದಿಗೆ 2 ಸ್ಥಾನಗಳನ್ನು ಗೆಲ್ಲಬಹುದಾಗಿದೆ.

You may also like