Home » Kambala: ಕಂಬಳ ಅನುದಾನ ವಿಸ್ತರಣೆ! 10 ಕಂಬಳಕ್ಕೆ ಮಾತ್ರ 5 ಲಕ್ಷ ರೂ.: ಶಾಸಕ ಅಶೋಕ ಕುಮಾರ್‌ ರೈ

Kambala: ಕಂಬಳ ಅನುದಾನ ವಿಸ್ತರಣೆ! 10 ಕಂಬಳಕ್ಕೆ ಮಾತ್ರ 5 ಲಕ್ಷ ರೂ.: ಶಾಸಕ ಅಶೋಕ ಕುಮಾರ್‌ ರೈ

0 comments
Kambala

Kambala: ಪುತ್ತೂರು ಶಾಸಕ ಅಶೋಕ ಕುಮಾರ್‌ ರೈ ಅವರು ಕಂಬಳ (Kambala) ಅನುದಾನ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಶಾಸಕರ ಸೂಚನೆಗೆ ಪ್ರವಾಸೋದ್ಯಮ ಹಾಗೂ ಕಾನೂನು-ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 25 ಕಂಬಳಗಳಿಗೆ ಈ ಹಿಂದೆ ತಲಾ 5 ಲಕ್ಷ ರೂ. ನೀಡಲಾಗುತ್ತಿತ್ತು. ಈ ಬಾರಿ 10ಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಲಾಗುವುದು. ಉಳಿದವುಗಳಿಗೆ ಅನುದಾನ ವಿಸ್ತರಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.

Surgery video: ಸ್ತನ ಕಸಿ ಸರ್ಜರಿ ವೀಡಿಯೋ ವೈರಲ್: ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಇನ್ನು ಗ್ರಾಮೀಣ ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಸಂಬಂಧ ಭೂ ಪರಿವರ್ತಿತ ಜಮೀನುಗಳ ಏಕವಿನ್ಯಾಸ ನಕ್ಷೆಗಳಿಗೆ ಈ ಹಿಂದಿನಂತೆ ಗ್ರಾಮ ಪಂಚಾಯತ್‌ಗಳಲ್ಲಿ ಅನುಮೋದನೆ ನೀಡಿ, 9 ಮತ್ತು 11 ಎ ನೀಡಲು ಅವಕಾಶ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪೀಕರ್‌ ಯು.ಟಿ. ಖಾದರ್‌ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಸಭೆ ಆಯೋಜಿಸಲಾಗಿದೆ.

ಅದರಂತೆ ಶಾಸಕ ಅಶೋಕ ರೈ ಅವರ ಗಮನ ಸೆಳೆಯುವ ಸೂಚನೆ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರು ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕರಾವಳಿ ಭಾಗದ ಎಲ್ಲ ಶಾಸಕರ ಜತೆ ಸಭೆ ಆಯೋಜಿಸಿದ್ದಾರೆ.

Jhanvi Kapoor: ಪೀರಿಯಡ್ಸ್‌ನಿಂದ ಲವ್ ಬ್ರೇಕ್ ಅಪ್ ಆಗ್ತಿತ್ತು, ಈ ಟೈಮಲ್ಲಿ ಬಾಯ್ ಫ್ರೆಂಡ್ ಜೊತೆ… !! ಭಯಾನಕ ಅನುಭವ ಬಿಚ್ಚಿಟ್ಟ ಜಾನ್ವಿ ಕಪೂರ್!

You may also like

Leave a Comment