Home » ಕಾಣಿಯೂರು: ಬುದ್ದಿಮಾಂದ್ಯ ಯುವತಿಯ ಅತ್ಯಾಚಾರ- ಆರೋಪಿ ಬಂಧನ

ಕಾಣಿಯೂರು: ಬುದ್ದಿಮಾಂದ್ಯ ಯುವತಿಯ ಅತ್ಯಾಚಾರ- ಆರೋಪಿ ಬಂಧನ

by Praveen Chennavara
0 comments

ಕಾಣಿಯೂರು: ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಾಣಿಯೂರು ಸಮೀಪ ನಡೆದಿದ್ದು, ಆರೋಪಿ ಬಂಡಾಜೆ ನಿವಾಸಿ ಚಂದ್ರಶೇಖರ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

ಯುವತಿಯ ಸಹೋದರ ಚೇತನ್‌ರವರು ಚಾರ್ವಾಕದಲ್ಲಿರುವ ತನ್ನ ಜಮೀನಿನಲ್ಲಿ ಕೃಷಿ ಕೆಲಸದ ಬಗ್ಗೆ ನನ್ನ ತಂದೆ ತಾಯಿಯವರನ್ನು ಬಿಟ್ಟು ಬರಲು ಹೋದ ಸಂದರ್ಭದಲ್ಲಿ ಬುದ್ದಿ ಮಾಂದ್ಯಳಾದ ನನ್ನ ಅಕ್ಕ ಮನೆಯಲ್ಲಿ ಒಬ್ಬಳೇ ಇದ್ದು, ಚಾರ್ವಾಕದಿಂದ ನಾನು ವಾಪಾಸು ಮನೆಗೆ ಬಂದಾಗ ಮನೆಯಲ್ಲಿದ್ದ ಅಕ್ಕ ಕಾಣದೇ ಇದ್ದಾಗ ಹುಡುಕುತ್ತಿರುವ ವೇಳೆ ಮನೆಯ ಎದುರಿನ ಗುಡ್ಡದಿಂದ ಬರುತ್ತಿದ್ದು, ವಿಚಾರಿಸಿದಾಗ ಆರೋಪಿ ಚಂದ್ರಶೇಖರ ಎಂಬವನು ನೀನು ನನ್ನ ಜೊತೆ ಗುಡ್ಡಕ್ಕೆ ಬರಬೇಕು ಇಲ್ಲದಿದ್ದರೆ ನಿನಗೆ ತೊಂದರೆ ನೀಡುತ್ತೇನೆ ಎಂದು ಬೆದರಿಸಿ ತೊಂದರೆ ನೀಡಿದ್ದಾನೆ ಎಂದು ಯುವತಿಯ ಸಹೋದರ ಚೇತನ್ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

You may also like

Leave a Comment