Su From So: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ‘ಸು ಫ್ರಮ್ ಸೋ’ ಸಿನಿಮಾ ಇದೀಗ ಒಟಿಟಿಗೆ ಕಾಲಿಟ್ಟಿದೆ. ಇಂದಿನಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಲು ಅವಕಾಶ ದೊರಕಿದೆ. ಆದರೆ ಆದರೆ ಓಟಿಟಿಯಲ್ಲಿ ರಿಲೀಸ್ ಮಾಡಿದ ಚಿತ್ರದಲ್ಲಿ ಎರಡು ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ ಎಂಬ ಅನುಮಾನ ಮೂಡಿದೆ.
ಹೌದು, ಬುಕ್ ಮೈ ಶೋನಲ್ಲಿ ಸಿನಿಮಾದ ಅವಧಿ 2 ಗಂಟೆ 17 ನಿಮಿಷ ಇದೆ. ಆದರೆ, ಒಟಿಟಿಯಲ್ಲಿ 7 ನಿಮಿಷ ಕಡಿಮೆ ತೋರಿಸುತ್ತಿದೆ. ಅಂದರೆ, ಒಟಿಟಿಯಲ್ಲಿ ರನ್ ಟೈಮ್ 2 ಗಂಟೆ 10 ನಿಮಿಷ ಎಂದು ಮಾತ್ರ ತೋರಿಸುತ್ತಿದೆ. ಆ ಏಳು ನಿಮಷ ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಯಾವುದಾದರೂ ದೃಶ್ಯಕ್ಕೆ ಕತ್ತರಿ ಹಾಕಿದರೇ ಎನ್ನುವ ಪ್ರಶ್ನೆಯನ್ನೂ ಅನೇಕರು ಕೇಳುತ್ತಿದ್ದಾರೆ.
ಇನ್ನು ಕೊನೆಯಲ್ಲಿ ಧನ್ಯವಾದ ಹೇಳುವ ಭಾಗವನ್ನು ಒಟಿಟಿಯಲ್ಲಿ ತೆಗೆದುಹಾಕಿರುವ ಕಾರಣ ಅವಧಿ ಕಡಿಮೆಯಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ಚಿತ್ರದ ತಂಡವೇ.
ಇನ್ನು ಜೆಪಿ ತುಮಿನಾಡಿ ಚೊಚ್ಚಲ ನಿರ್ದೇಶನದಲ್ಲಿ ಬಂದ ಈ ‘ಸು ಫ್ರಮ್ ಸೋʼ ಚಿತ್ರವನ್ನು ನೋಡಿ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದರು. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುವ ಮೂಲಕ ಬ್ಲಾಕ್ ಬಸ್ಟರ್ ಲಿಸ್ಟ್‌ಗೆ ಚಿತ್ರ ಸೇರಿದೆ.
